ಮಡಿಕೇರಿ, ಅ. 9: ಕೊಯವ ಸಮಾಜದ 13ನೇ ವರ್ಷದ ವಾರ್ಷಿಕ ಮಹಾಸಭೆ ಮತ್ತು ಕೈಲ್‍ಪೊಳ್ದ್ ಸಂತೋಷಕೂಟವು ತಾ. 13ರಂದು ಬೆಳಿಗ್ಗೆ 10.30 ಗಂಟೆಗೆ ನಡೆಯಲಿದೆ. ಸಮಾಜದ ಅಧ್ಯಕ್ಷ ಜಲ್ಲಂಡ ದಾದು ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ಮೂರ್ನಾಡಿನ ಟಿ.ಎ.ಪಿ.ಸಿ.ಎಂ.ಎಸ್.ನ ಸಭಾಂಗಣದಲ್ಲಿ ನಡೆಯಲಿದೆ ಎಂದು ಗೌರವ ಕಾರ್ಯದರ್ಶಿ ಟಿ.ಜಿ. ಕಾರ್ಯಪ್ಪ ತಿಳಿಸಿದ್ದಾರೆ.