ಗೋಣಿಕೊಪ್ಪ ವರದಿ, ಅ. 9 : ಇಲ್ಲಿನ ಕಾವೇರಿ ಪದವಿಪೂರ್ವ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ತಾ.10 ರಿಂದ ತಾ. 16 ರವರೆಗೆ ಬೆಕ್ಕೆಸೊಡ್ಲೂರು ಶಾರದ ಪ್ರೌಢಶಾಲೆಯಲ್ಲಿ ವಾರ್ಷಿಕ ವಿಶೇಷ ಶಿಬಿರ ಆಯೋಜಿಸಲಾಗಿದೆ.

ತಾ. 10ರಂದು (ಇಂದು) ಸಾಯಂಕಾಲ 3 ಗಂಟೆಗೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಚೋಡುಮಾಡ ಶರೀನ್ ಸುಬ್ಬಯ್ಯ ಉದ್ಘಾಟಿಸಲಿದ್ದಾರೆ.

ಪ್ರತಿದಿನ ಮ. 2.30 ಕ್ಕೆ ಶೈಕ್ಷಣಿಕ ಕಾರ್ಯಕ್ರಮ, ಸಂಜೆ 5 ಕ್ಕೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.

ತಾ. 11 ರಂದು ಹಾವುಗಳ ರಕ್ಷಣೆ ಬಗ್ಗೆ ಉರಗ ಪ್ರೇಮಿ ಶರತ್ ಮಾಹಿತಿ ನೀಡಲಿದ್ದಾರೆ. ಶ್ಯಾಮಲಾ ಮತ್ತು ತಂಡದಿಂದ ಭರತನಾಟ್ಯ ನಡೆಯಲಿದೆ. ತಾ. 12 ರಂದು ಗ್ರೀನ್‍ಡಾಟ್ ಸಂಸ್ಥೆ ಆಡಳಿತಾಧಿಕಾರಿ ವಿಶ್ವನಾಥ್ ಹದಿಹರೆಯದವರ ಸಮಸ್ಯೆಗಳ ಬಗ್ಗೆ ಮಾಹಿತಿ, ತಾ. 13 ರಂದು ಸ್ವಾಸ್ಥ್ಯ ಆಯುರ್ವೇಧ ಫೌಡೇಷನ್ ವೈದ್ಯ ಡಾ. ಸುಬ್ರಮಣ್ಯರಾವ್ ಅವರಿಂದ ಚಿಕಿತ್ಸೆ ಕಾರ್ಯಾಗಾರ, ಕೊಡಗು ದಂತ ಮಹಾವಿದ್ಯಾಲಯದಿಂದ ಉಚಿತ ದಂತ ತಪಾಸಣಾ ಶಿಬಿರ, ತಾ. 14 ರಂದು ಯುವ ನಿರ್ದೇಶಕಿಯರಾದ ದೀನಾ-ಗಾನಾ ಜೋಡಿ ನಿರ್ದೇಶನದ ಕಿರುಚಿತ್ರ ನೆಪ್ಪ್‍ರ ನಳ ಪ್ರದರ್ಶನ ಮತ್ತು ಸಾಮಾಜಿಕ ಮೌಲ್ಯ ಕಾರ್ಯಾಗಾರ, ತಾ. 15 ರಂದು ನಿವೃತ್ತ ಶಿಕ್ಷಕ ಕಾಳಿಮಾಡ ಮೋಟಯ್ಯ ಅವರಿಂದ ಪರೀಕ್ಷಾಪೂರ್ವ ತರಬೇತಿ, ರಸಪ್ರಶ್ನೆ ನಡೆಯಲಿದೆ. ತಾ. 16 ರಂದು ಸಮಾರೋಪ ನಡೆಯಲಿದೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.