ಮಡಿಕೇರಿ, ಅ. 4: ನಗರ ದಸರಾ ಸಮಿತಿ, ದಸರಾ ಸಾಂಸ್ಕøತಿಕ ಸಮಿತಿ ವತಿಯಿಂದ ಮಡಿಕೇರಿ ಜನೋತ್ಸವ ಸಾಂಸ್ಕøತಿಕ ಕಾರ್ಯಕ್ರಮದಡಿ ಕಲಾ ಸಂಭ್ರಮ ವೇದಿಕೆಯಲ್ಲಿ ತಾ. 3 ರಂದು ಮೈಸೂರಿನ ನಿಸರ್ಗ ಮತ್ತು ವಿಸ್ಮಯ ಅವಳಿ ಸಹೋದರಿಯರಿಂದ ಸುಗಮ ಸಂಗೀತ, ಬೆಟ್ಟಗೇರಿಯ ಬೈಚನ ಭುವನ ತಂಡದಿಂದ ಅರೆಭಾಷೆ ನೃತ್ಯ ವೈಭವ, ತೋರ ಗ್ರಾಮದ ಕುಡಿಯರ ಗೋಪಮ್ಮ ಮತ್ತು ತಂಡದಿಂದ ಉರುಟ್ಟಿ ಕೊಟ್ಟ್ ಆಟ್, ಬಳ್ಳಾರಿ ಏಕಲವ್ಯ ಸಾಂಸ್ಕøತಿಕ ಕಲಾ ಸಂಘದಿಂದ ವೀರಗಾಸೆ, ಲಂಬಾಣಿ ಬಂಜಾರ ಕುಣಿತ ಮತ್ತು ಜಾನಪದ ವೈವಿದ್ಯ, ಮುಕ್ಕೊಡ್ಲುವಿನ ವ್ಯಾಲಿಡ್ಯೂ ತಂಡದಿಂದ ಕೊಡವ ಜಾನಪದ ವೈವಿಧ್ಯ, ವೀರಾಜಪೇಟೆಯ ನಾಟ್ಯಮಯೂರಿ ನೃತ್ಯ ತಂಡದಿಂದ ನಾಟ್ಯ ವೈವಿಧ್ಯ, ಸೇಲಂನ ಕೋವೈ ಎಕ್ಸ್‍ಪ್ರೆಸ್ ಖ್ಯಾತಿಯ ತಂಡದಿಂದ ಕರಗಾಟಂ ನೆರವೇರಿದವು.