ಮೂರ್ನಾಡು, ಅ. 7: ಇಲ್ಲಿಗೆ ಸಮೀಪದ ಬಲಮುರಿ ಗ್ರಾಮದ ಅಗಸ್ತೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಕಾವೇರಿ ಜಾತ್ರೆಯು ತಾ. 18 ರಂದು ನಡೆಯಲಿದೆ. ಕಾವೇರಿ ಜಾತ್ರೆಯ ಪ್ರಯುಕ್ತ ದೇವಸ್ಥಾನದಲ್ಲಿ ಅಂದು ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಬಲಮುರಿ ಗ್ರಾಮದ ಪೇರಿಯಂಡ ಪೆಮ್ಮಯ್ಯ ಅವರು ಅಂದಿನ ಅನ್ನದಾನ ಕಾರ್ಯಕ್ರಮವನ್ನು ವಹಿಸಿಕೊಂಡಿ ದ್ದಾರೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಕೊಂಗಿರಂಡ ಸಾಧು ತಮ್ಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.