*ಗೋಣಿಕೊಪ್ಪಲು, ಅ. 4: ಭರತನಾಟ್ಯ, ಉರುಟಿಕೊಟ್ಟ್ ಆಟ್, ಜಾನಪದ ಗೀತೆ, ಭಾವಗೀತೆ, ಚಿತ್ರಗೀತೆಗಳು ಶ್ರೀ. ಕಾವೇರಿ ಕಲಾವೇದಿಕೆಯಲ್ಲಿ 5ನೇ ದಿನ ಸಾಂಸ್ಕೃತಿಕ ವೈಭವದ ಮೆರಗು ನೀಡಿತು.

ಜಗನ್ಮೋಹನ ನಾಟ್ಯಾಲಯ ಸಂಸ್ಥೆಯ ವಿದ್ಯಾರ್ಥಿಗಳಿಂದ ಪುಷ್ಪಾಂಜಲಿ ಹರ್ಷ ಕೀರ್ತಿ, ದಶರಥ, ತ್ರಿಶಾ, ಲೋಹಿತ್, ಪ್ರಿಯಾಂಕ, ಲೋಕೇಶ್, ಸಮೀಕ್ಷ, ರಾಜನ್, ಅಬಿಜ್ಞ, ಜಯಂತ್, ಕೃಷ್ಣ ಪ್ರಿಯ, ರಾಜೇಶ್ ಆಚಾರ್ಯ, ಆರ್ಚನಾ, ಶಶಿ, ದೇವಿಕಾ, ಶಶಿಕುಮಾರ್, ಸಾನಿಧ್ಯ ಬಾಲಕೃಷ್ಣನ್, ರೇವತಿ ವೆಂಕಟೇಶ್, ಅನ್ವಿತ್ ಪ್ರಹ್ಲಾದ್, ಶ್ರಾವ್ಯ ಪದ್ಮನಾಭ ನಾಯಕ್ ಭರತನಾಟ್ಯ ನಡೆಸಿಕೊಟ್ಟರು. ತೋರ ಗ್ರಾಮದ ಗೋಪಮ್ಮ ತಂಡದಿಂದ ಉರುಟಿಕೊಟ್ಟ್ ಆಟ್, ಮೈಸೂರು ಅಮ್ಮ ರಾಮಚಂದ್ರ ಅವರ ಸುಗಮ ಸಂಗೀತ, ಜಾನಪದ ಗೀತೆ, ಭಾವಗೀತೆ, ಚಿತ್ರಗೀತೆಗಳು ಮೂಡಿಬಂದವು

ಇಂದಿನ ಕಾರ್ಯಕ್ರಮ : ತಾ. 5ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ಮನೆಯಪಂಡ ಯಾರ್ಡಿನಲ್ಲಿ ಡರ್ಟ್ ಟ್ರ್ಯಾಕ್ ರ್ಯಾಲಿ ಆಟೋ ಕ್ರಾಸ್, ಸಂಜೆ 6.30 ರಿಂದ 7.30 ಶ್ರೀ ಗಣೇಶ್ ಬಿ.ಎಂ. ಆಕಾಶವಾಣಿ ಕಲಾವಿದರು ಇವರಿಂದ ಸುಗಮ ಸಂಗೀತ ಹಾಗೂ ಹಳೆ ಚಿತ್ರಗೀತೆಗಳು, 8.30 ರಿಂದ 9.30ರವರೆಗೆ ಕಾವೇರಿ ಕಲಾ ಸಿರಿ ತಂಡದಿಂದ ಸಾಂಸ್ಕೃತಿಕ ಸಂಜೆ, 9.30 ರಿಂದ ರಿಫ್ಲೆಕ್ಷನ್ ತಂಡದಿಂದ ನೃತ್ಯ ವೈಭವ ನಡೆಯಲಿದೆ.