ಗೋಣಿಕೊಪ್ಪಲು, ಅ. 7: ವಾಣಿಜ್ಯ ನಗರ ಗೋಣಿಕೊಪ್ಪಲುವಿ ನಲ್ಲಿ ಸಂಭ್ರಮದ ಆಯುಧ ಪೂಜೆ ನಡೆಯಿತು. ಈ ಬಾರಿ ಪಿರಿಯಾ ಪಟ್ಟಣ, ಪಂಚವಳ್ಳಿ, ಹುಣಸೂರು, ಸೇರಿದಂತೆ ವಿವಿಧ ಭಾಗದಿಂದ ಆಗಮಿಸಿದ ಹೆಚ್ಚಿನ ರೈತರು ಹೂವಿನ ವ್ಯಾಪಾರ ನಡೆಸಿದರು. ನಗರದ ಜ್ಯುವೆಲ್ಲರಿ ಮಳಿಗೆಗೆಳು ಸೇರಿದಂತೆ ಇನ್ನಿತರ ಅಂಗಡಿ ಮುಂಗಟ್ಟುಗಳು ತಳಿರು ತೋರಣ ದಿಂದ ಅಲಂಕೃತ ಗೊಂಡಿದ್ದವು. ಕೆಲವು ಅಂಗಡಿ ಮಳಿಗೆಗಳಿಗೆ ಲೈಟಿಂಗ್ಸ್ ವ್ಯವಸ್ಥೆ ಮಾಡಲಾಗಿತ್ತು. ಚೆಸ್ಕಾಂ ಇಲಾಖೆಯ ಕಚೇರಿ ಆವರಣದಲ್ಲಿ ಮಾಡಲಾಗಿದ್ದ ಲೈಟಿಂಗ್ ವ್ಯವಸ್ಥೆ ಸಾರ್ವಜನಿಕರ ಗಮನ ಸೆಳೆಯಿತು. ಪಟ್ಟಣದ ಕಣ್ಣನ್ ಟಯರ್ಸ್ ಮಳಿಗೆ, ಉಮಾಮಹೇಶ್ವರಿ ದೇವಸ್ಥಾನದಲ್ಲಿ ಅದ್ಧೂರಿಯ ಲೈಟಿಂಗ್ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ಉಮಾಮಹೇಶ್ವರಿ ದೇವಸ್ಥಾನ ಸೇರಿದಂತೆ ಅಕ್ಕಪಕ್ಕದ ದೇವಸ್ಥಾನಗಳಲ್ಲಿ ವಾಹನ ಪೂಜೆ ನಡೆಸಲು ಮುಂಜಾನೆಯಿಂದಲೇ ಸಾರ್ವಜನಿಕರು ಸರತಿ ಸಾಲಿನಲ್ಲಿ ಕಾಣಿಸಿಕೊಂಡರು.
ನಗರದಲ್ಲಿ ಬಹುತೇಕ ಖಾಸಗಿ ಬಸ್ಗಳು ಮುಂಜಾನೆಯೇ ಹೂವಿ ನಿಂದ ಅಲಂಕೃತಗೊಂಡು ಪೂಜೆ ನಡೆಸಿ ನಂತರ ಎಂದಿನಂತೆ ಓಡಾಟ ಆರಂಭಿಸಿದ್ದವು.