ಕುಶಾಲನಗರ, ಅ. 7: ಶ್ರೀ ಶಿರಡಿ ಸಾಯಿ ಟ್ರಸ್ಟ್ ಆಶ್ರಯದಲ್ಲಿ ಕುಶಾಲನಗರ ಸಾಯಿಬಾಬ ದೇವಾಲಯದಲ್ಲಿ ಸಾಯಿಬಾಬರ 101 ನೇ ಪುಣ್ಯಸ್ಮರಣೆ ಮತ್ತು ದೇವಾಲಯದ ಪ್ರಥಮ ವಾರ್ಷಿಕೋತ್ಸವ ಪ್ರಯುಕ್ತ ತಾ. 8 ರಂದು (ಇಂದು) ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ತಾ. 8 ರಂದು ಬೆಳಗಿನಿಂದ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು ಮಧ್ಯಾಹ್ನ 12.30 ರಿಂದ ಶ್ರೀ ಸಾಯಿ ಶತನಾಮಾವಳಿ ಹೋಮ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಮತ್ತು ಸಂಜೆ 7 ರಿಂದ 9 ರ ತನಕ ಶ್ರೀ ಸಾಯಿ ಅಷ್ಟೋತ್ತರ ಪೂಜೆ ನಡೆಯಲಿದೆ.

ದಿನಾಂಕ 9 ರಂದು ಬೆಳಗ್ಗೆ 8 ರಿಂದ ಗಣಪತಿ ಹೋಮ, ನವಗ್ರಹ ಹೋಮ ನಂತರ ಗಾಯತ್ರಿ ಶಾಂತಿ ಹೋಮ, ಮೃತ್ಯುಂಜಯ ಹೋಮ, ನಂತರ ಪ್ರಸಾದ ವಿನಿಯೋಗ ನಡೆಯಲಿದೆ. ದಿನಾಂಕ 1 ರಂದು ಬೆಳಗ್ಗೆ 8 ರಿಂದ ಅಭಿಷೇಕ ಮತ್ತಿತರ ವಿಶೇಷ ಪೂಜೆಗಳು ಜರುಗಲಿವೆ ಎಂದು ಟ್ರಸ್ಟ್‍ನ ಪದಾಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ. 9481818183, 9449748077 ಸಂಪರ್ಕಿಸುವಂತೆ ಕೋರಿದ್ದಾರೆ.