*ಮಡಿಕೇರಿ ಕಿಂಗ್ಸ್ ಚಾಂಪಿಯನ್ *ಯುನೈಟೆಡ್ ಕಿಂಗ್ಸ್ ದ್ವಿತೀಯ *ನಾಟ್ಯ ಕಲಾ ತಂಡ ತೃತೀಯ

ಮಡಿಕೇರಿ, ಅ. 6: ಅಬ್ಬರದ ಸಂಗೀತ.., ಸಂಗೀತಕ್ಕೆ ತಕ್ಕ ಕುಣಿತ.., ಎಲ್ಲಿಲ್ಲದ ಉತ್ಸಾಹ..., ಕುಣಿದು ಕುಪ್ಪಳಿಸಿದ ಯುವ ಸಮೂಹ..., ಬಹುಮಾನ ಗೆದ್ದವರ ಸಂಭ್ರಮ.., ಅಭಿಮಾನಿಗಳ ಪ್ರೋತ್ಸಾಹ.., ದೇಹ ಶಕ್ತಿಯ ಪ್ರದರ್ಶನ.., ನಡುರಾತ್ರಿ ಕಳೆದರೂ ಬತ್ತದ ಉತ್ಸಾಹ...,

ಇದು ಮಡಿಕೇರಿ ಯುವ ದಸರಾ ಸಂಭ್ರಮದಲ್ಲಿ ಕಂಡು ಬಂದ ಚಿತ್ರಣ.., ತ್ರಿಡಿ ಯುವ ದಸರಾ ತಂಡದ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮ ಸಹಸ್ರಾರು ಮಂದಿ ಜನಸ್ತೋಮದ ಸಹಭಾಗಿತ್ವದೊಂದಿಗೆ ಯಶ ಕಂಡಿತು.

ಪುಟಾಣಿ ಝೀ ಕನ್ನಡ ಸರಿಗಮಪ ಖ್ಯಾತಿಯ ಜ್ಞಾನ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಯುವ ತಂಡಗಳ ನೃತ್ಯ ಸ್ಪರ್ಧೆಯಲ್ಲಿ ಎಂಟು ತಂಡಗಳು ಭಾಗವಹಿಸಿದ್ದವು. ಒಂದಕ್ಕಿಂತ ಒಂದು ಮಿಗಿಲಾದ ಕಾರ್ಯಕ್ರಮ ಗಳಲ್ಲಿ ಅಂತಿಮವಾಗಿ ಮಡಿಕೇರಿಯ ಮಹೇಶ್ ನೇತೃತ್ವದ ಕಿಂಗ್ಸ್ ಆಫ್ ಕೂರ್ಗ್ ತಂಡ ಪ್ರಥಮ ಸ್ಥಾನ ಗಳಿಸಿ ಚಿನ್ನದ ಬಹುಮಾನ ಪಡೆದು ಕೊಂಡಿತು. ಮಡಿಕೇರಿಯ ದಿನೇಶ್ ನೇತೃತ್ವದ ಕಿಂಗ್ಸ್ ಯುನೈಟೆಡ್ ತಂಡ ದ್ವಿತೀಯ ಬಹುಮಾನ ಪಡೆದರೆ, ಕುಶಾಲನಗರದ ಅಭಿಷೇಕ್ ನೇತೃತ್ವದ ಕಾವ್ಯ ನಾಟ್ಯ ಕಲಾ ತಂಡ ತೃತೀಯ ಬಹುಮಾನ ಪಡೆದುಕೊಂಡಿತು.

ಇದರೊಂದಿಗೆ ಮಡಿಕೇರಿಯ ಮಲ್ಲಿಕಾರ್ಜುನ ನಗರದ ಗೋಪಿನಾಥ್ ಸಾರಥ್ಯದ ಸಾಯಿ ಫಿಟ್ನೆಸ್ ಜಿಮ್ನಾಸ್ಟಿಕ್ ಕೇಂದ್ರದ ಬಾಡಿ ಬಿಲ್ಡರ್‍ಗಳ ದೇಹ ದಾಢ್ರ್ಯ ಪ್ರದರ್ಶನ ಪ್ರೇಕ್ಷಕರ ಮೈ ರೋಮಾಂಚನ ಗೊಳಿಸಿತು. ಉಗಾಂಡದಿಂದ ಆಗಮಿಸಿದ್ದ ತಂಡದ ಡ್ರಂ ಬೀಟ್ ಹೈಕಳನ್ನು ಕುಣಿಯುವಂತೆ ಮಾಡಿತು.

ನಡು ನಡುವೆ ವಿವಿಧ ಕಾರ್ಯಕ್ರಮಗಳು ಮನಸೂರೆ ಗೊಂಡವು. ಕೊನೆಯಲ್ಲಿ ತ್ರಿಡಿ ಯುವ ದಸರಾ ಸಮಿತಿಯ ಸೋಮು ನಡೆಸಿಕೊಟ್ಟ ಡಿಜೆ ಸಂಗೀತಕ್ಕೆ ಯುವ ಸಮೂಹ ಸಹಿತ ವೃದ್ಧರಾದಿಯಾಗಿ ಎಲ್ಲರೂ ಹೆಜ್ಜೆ ಹಾಕಿದರು. ದಸರಾ ಸಮಿತಿ, ಸಾಂಸ್ಕøತಿಕ ಸಮಿತಿ, ಯುವ ದಸರಾ ಸಮಿತಿ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿನಲ್ಲಿ ಭಾಗಿ ಯಾಗಿದ್ದರು. ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿತ್ತು.

-ಸಂತೋಷ್, ಚಿತ್ರ: ಲಕ್ಷ್ಮೀಶ್