ಕೂಡಿಗೆ, ಅ. 6: ತಾಯಿ ಹಾಗೂ ಮಗಳು ಸೇರಿಕೊಂಡು ಸಂಬಂಧಿಯೊಬ್ಬರನ್ನು ಹತ್ಯೆ ಮಾಡಿದ ಘಟನೆ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಹಳೆ ಕೂಡಿಗೆಯಲ್ಲಿ ಶಿವು (40) ಎಂಬವರನ್ನು ಅವರ ಅತ್ತಿಗೆ ಯಶೋಧ (40) ಹಾಗೂ ಆಕೆಯ ಪುತ್ರಿ ಹರಿಣಿ (22) ಸೇರಿಕೊಂಡು ದೀಪದ ಕಂಬ ಹಾಗೂ ಸಲಾಕೆಯಿಂದ ಹಲ್ಲೆ ಮಾಡಿ ಹತ್ಯೆಗೈದಿದ್ದು, ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾರೆ.ಘಟನಾ ಸ್ಥಳಕ್ಕೆ ಡಿವೈಎಸ್‍ಪಿ ಮುರಳೀಧರ್, ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ಭೇಟಿ ನೀಡಿ ಪರಿಶೀಲಿಸಿದರು.ಆರೋಪಿಗಳ ವಿರುದ್ಧ ಈ ಭಾಗದ ನಾಗರಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.

-ಕೆ.ಕೆ.ಎನ್.