ಸೋಮವಾರಪೇಟೆ, ಅ. 6: ನವರಾತ್ರಿ ಅಂಗವಾಗಿ ಇಲ್ಲಿನ ಬಸವೇಶ್ವರ ದೇವಾಲಯದಲ್ಲಿ ನವದುರ್ಗಾ ದೇವಿಗೆ ಪಂಚಮ ಅವತಾರ, ಅಭಿಷೇಕ, ಅಷ್ಟೋತ್ತರ ಮಹಾಮಂಗಳಾರತಿ ನಡೆಯಿತು. ಸಂಜೆ ದೇವಿಗೆ ವಿವಿಧ ವರ್ಣಗಳ ಸೀರೆಗಳ ಅಲಂಕಾರ ಮಾಡಲಾಗಿತ್ತು.
ಸೋಮೇಶ್ವರ ದೇವಾಲಯದಲ್ಲಿ: ಇಲ್ಲಿನ ಬ್ರಾಹ್ಮಣ ಸಮಾಜದಲ್ಲಿ ನವರಾತ್ರಿ ಪೂಜಾ ಪ್ರಯುಕ್ತ ದೇವಾಲಯದಲ್ಲಿ ಬೆಳಿಗ್ಗೆ ಶಕ್ತಿ ಪಾರ್ವತಿ ದೇವಿಗೆ ಅಭಿಷೇಕ ಹಾಗೂ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ಸಂಜೆ ದೇವಿಗೆ ಭಾರತಾಂಭೆಯ ಅಲಂಕಾರ ನಡೆಯಿತು.