ಭಾಗಮಂಡಲ, ಅ. 6: ಮಡಿಕೇರಿ ತಾಲೂಕು ಭಾಗಮಂಡಲ ಅರಣ್ಯ ವಲಯವ್ಯಾಪ್ತಿಯಲ್ಲಿ 2018-19ರ ಸಾಲಿನ ಎಸ್‍ಟಿಪಿ ಮತ್ತು ಎಸ್‍ಸಿಪಿ ಯೋಜನೆಯ ಎಸ್‍ಸಿ ಮತ್ತು ಎಸ್‍ಟಿ ಅರ್ಹ ಫಲಾನುಭವಿ ಗಳಿಗೆ ಉಚಿತವಾಗಿ ಅಡುಗೆ ಅನಿಲ ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಸದಸ್ಯೆ ಕವಿತಾ ಪ್ರಭಾಕರ್ ಅಡುಗೆ ಅನಿಲಗಳನ್ನು ಫಲಾನುಭವಿಗಳಿಗೆ ವಿತರಿಸಿದರು. ಸಮಾರಂಭದ ಅದ್ಯಕ್ಷತೆಯನ್ನು ವಲಯ ಅರಣ್ಯ ಅಧಿಕಾರಿ ಹೆಚ್.ಜಿ. ದೇವರಾಜ್ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಕೆ. ಕುಮಾರ್, ಭಾಗಮಮಡಲ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಮರಿಸ್ವಾಮಿ, ಜನಪ್ರತಿನಿಧಿ ಬಾಲಕೃಷ್ಣ ನಾಯರ್, ಉಪವಲಯ ಅರಣ್ಯಾಧಿಕಾರಿಗಳಾದ ಸುರೇಶ್, ಮಂಜುನಾಥ್, ಶ್ರೀಧರ್, ಸಚಿನ್ ಮತ್ತಿತರರು ಉಪಸ್ಥಿತರಿದ್ದರು.ಮಡಿಕೇರಿ: ನವರಾತ್ರಿ ಪ್ರಯುಕ್ತ ಕಡಿಯತೂರು ಭಗವತಿ ದೇವಾಲಯದಲ್ಲಿ ಮಡಿಕೇರಿಯ ಶ್ರೀ ವಿಜಯ ವಿನಾಯಕ ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು.