ಮಡಿಕೇರಿ, ಅ. 6: ಗೋಣಿಕೊಪ್ಪದ ಕಾವೇರಿ ದಸರಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಯುವ ದಸರಾದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್ ತಂಡ ಪ್ರಥಮ ಬಹುಮಾನ ಪಡೆದುಕೊಂಡಿದೆ. ನೃತ್ಯ ಸಂಯೋಜಕ ಮಹೇಶ್ ನಿರ್ದೇಶನದಲ್ಲಿ ತಂಡದ ಕಲಾವಿದರು ಪ್ರದರ್ಶಿಸಿದ ಹಿರಣ್ಯಕಶಿಪು ಸಂಹಾರದ ಕಥಾಹಂದರದ ನೃತ್ಯ ರೂಪಕ ಬಹುಮಾನಕ್ಕೆ ಭಾಜನವಾಗಿದೆ. ಒಟ್ಟು 30 ಮಂದಿ ಕಲಾವಿದರು ಭಾಗವಹಿಸಿದ್ದರು. ಕಳೆದ ವರ್ಷ ಕೂಡ ಕಿಂಗ್ಸ್ ತಂಡ ಪ್ರಥಮ ಬಹುಮಾನ ಪಡೆದುಕೊಂಡಿತ್ತು.