ಗೋಣಿಕೊಪ್ಪ, ಅ. 6: ಇಲ್ಲಿನ ಕಾವೇರಿ ಪದವಿ ಕಾಲೇಜಿನ 2019-20ನೇ ಸಾಲಿನ ಪೋಷಕ-ಬೋಧಕ ಸಂಘದ ಸಭೆಯನ್ನು ಪ್ರಾಂಶುಪಾಲರಾದ ಪ್ರೊ. ಕೆ.ವಿ. ಕುಸುಮಾಧರ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಬಿಎ, ಬಿಕಾಂ, ಬಿ.ಎಸ್ಸಿ, ಬಿಬಿಎ ಹಾಗೂ ಬಿಸಿಎ ವಿಭಾಗದ ವಿದ್ಯಾರ್ಥಿಗಳ ಪೋಷಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭ ಪೋಷಕ-ಬೋಧಕ ಸಂಘಕ್ಕೆ ಪೋಷಕರ ಪರವಾಗಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಉಪಾಧ್ಯಕ್ಷರಾಗಿ ಮಚ್ಚಾರಂಡ ಕೆ. ರೀಟಾ, ಕಾರ್ಯದರ್ಶಿಯಾಗಿ ಟಿ.ಎನ್. ಮಾದೇಶ್, ಜಂಟಿ ನಿರ್ದೇಶಕರಾಗಿ ನಾರಾಯಣ ಸ್ವಾಮಿ ನಾಯ್ಡು, ಪ್ರಭಾ ಪ್ರಕಾಶ್ ಇವರುಗಳನ್ನು ನೇಮಕ ಮಾಡಲಾಯಿತು. ಈ ಸಂದರ್ಭ ಪೋಷಕ-ಬೋಧಕ ಸಂಘದ ಸಂಚಾಲಕಿ ಕೆ.ಟಿ. ಸೀತಮ್ಮ, ಎಲ್ಲಾ ವಿಭಾಗಗಳ ಮುಖ್ಯಸ್ಥರು ಹಾಗೂ ಉಪನ್ಯಾಸಕರು ಹಾಜರಿದ್ದರು.