ಮಡಿಕೇರಿ, ಅ. 6: ನಗರದ ಶ್ರೀ ಕೋಟೆ ಗಣಪತಿ ದಸರಾ ಮಂಟಪವು ವಿಜಯದಶಮಿಯಂದು ಪ್ರದರ್ಶನ ನೀಡುವ ಸಮಯ ದೇವಾಲಯದ ಆವರಣದಲ್ಲಿ ರಾತ್ರಿ 9 ಗಂಟೆಗೆ, (ಮೊದಲ ಪ್ರದರ್ಶನ) 10 ಗಂಟೆಗೆ ಹಾಗೂ 11 ಗಂಟೆಗೆ, ಕೋಟೆ ಆವರಣದ ಗೇಟಿನ ಮುಂಭಾಗ 12 ಗಂಟೆಗೆ, ನಗರ ಪೊಲೀಸ್ ಠಾಣೆಯ ಮುಂಭಾಗ ದಂಡಿನ ಮಾರಿಯಮ್ಮ ಮಂಟಪದ ತೀರ್ಪುಗಾರಿಕೆ ಪ್ರದರ್ಶನದ ಬಳಿಕ 3 ಗಂಟೆಗೆ, ತೀರ್ಪುಗಾರಿಕೆಯ ಪ್ರದರ್ಶನ 3.40 ಗಂಟೆಗೆ, ಹಳೆಯ ಖಾಸಗಿ ಬಸ್ ನಿಲ್ದಾಣದಲ್ಲಿ ಬೆಳಗ್ಗಿನ ಜಾವ 5 ಗಂಟೆಗೆ, ಚೌಕ್ ಸರ್ಕಲ್ 7 ಗಂಟೆಗೆ, ಮಾರ್ಕೆಟ್ ಆವರಣ 11 ಗಂಟೆಗೆ, ಬಸವೇಶ್ವರ ದೇವಸ್ಥಾನದ ಎದುರುಗಡೆ 12.30 ಗಂಟೆಗೆ ಪ್ರದರ್ಶನ ನೀಡಲಾಗುವದೆಂದು ಪ್ರಕಟಣೆ ತಿಳಿಸಿದೆ.