ಮಡಿಕೇರಿ, ಅ.5: ಸಂಸ್ಕøತಿಯ ಬದಲಾವಣೆಯೊಂದಿಗೆ ಜೀವನ ವಿಧಾನವೂ ಬದಲಾದ ಪರಿಣಾಮ ಹಿರಿಯರನ್ನು ಗೌರವಿಸುವದನ್ನು ಮರೆಯುತ್ತಿದ್ದೇವೆ. ಹೀಗಾಗಿಯೇ ಸಮಾಜದಲ್ಲಿ ಹಿರಿಯ ನಾಗರಿಕರ ಆರೈಕೆಯ ತಾಣಗಳು ಹೆಚ್ಚಾಗುತ್ತಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯು ವಿಷಾದಿಸಿದ್ದಾರೆ.
ಮಡಿಕೇರಿ ರೋಟರಿ ಕ್ಲಬ್ಗೆ ಅಧಿಕೃತ ಭೇಟಿ ಸಂದರ್ಭ ರೋಟರಿ ವತಿಯಿಂದ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರನ್ನು ರೋಟರಿ ವತಿಯಿಂದ ಸನ್ಮಾನಿಸಿ ಮಾತನಾಡಿದ ಜೊಸೇಫ್ ಮ್ಯಾಥ್ಯು, ಹಿರಿಯರ ವಿಶ್ರಾಂತಿ ತಾಣಗಳು ಹೆಚ್ಚಾಗುತ್ತಿರು ವದು ಆರೋಗ್ಯಕರ ಸಮಾಜದ ಲಕ್ಷಣವಲ್ಲ. ಸ್ಥಿತಿವಂತ ಮಕ್ಕಳೂ ತಮ್ಮ ಹೆತ್ತವರನ್ನು ನಿರ್ಲಕ್ಷಿಸಿ ಹಿರಿಯ ನಾಗರಿಕರ ಆಶ್ರಯ ತಾಣಗಳಿಗೆ ಸೇರ್ಪಡೆಗೊಳಿಸುವಂತಾಗಿರುವದು ಸಮಾಜದ ದುರಂತಗಳಲ್ಲೊಂದಾಗಿದೆ. ವಯಸ್ಕರನ್ನು ಈ ರೀತಿ ಕಡೆಗಾಣಿಸುತ್ತಿರುವದು ಸಾಮಾಜಿಕ ಪಿಡುಗಾಗಿ ಪರಿಣಮಿಸುತ್ತಿದೆ ಎಂದು ಹೇಳಿದರು. ಹೋಂನರ್ಸ್ಗಳು ಮನೆಯೊಳಗೆ ಬಂದು ಹಿರಿಯರನ್ನು ಆರೈಕೆ ಮಾಡಲಾರಂಭಿಸುತ್ತಿರುವದು ನಮ್ಮ ಸಂಸ್ಕøತಿಯ ಅಧಃಪತನಕ್ಕೆ ಉದಾಹರಣೆಯಾಗಿದೆ ಎಂದೂ ಅವರು ಬೇಸರ ವ್ಯಕ್ತಪಡಿಸಿದರು.
ಅವಿಭಕ್ತ ಕುಟುಂಬ ಪದ್ಧತಿ ಮರೆಯಾಗಿ ನಾನು, ನನ್ನದು ಎಂಬ ಸ್ವಾರ್ಥವೇ ಹೆಚ್ಚಾಗುತ್ತಿರುವದ ರಿಂದಾಗಿಯೇ ಇಂಥ ದುರದೃಷ್ಟಕರ ಬೆಳವಣಿಗೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟ ಜೋಸೆಫ್ ಮ್ಯಾಥ್ಯು, ಹಿರಿಯ ನಾಗರಿಕರ ಮಹತ್ವ ತಿಳಿಸುವದರೊಂದಿಗೆ ವಯಸ್ಕರ ಆರೋಗ್ಯಪರ ಕಾಳಜಿ ವಹಿಸಲೇ ಜೀವನ್ ಸಂಧ್ಯಾದಂಥ ಯೋಜನೆ ಯನ್ನು ರೋಟರಿ ಜಿಲ್ಲೆ 3181 ಈ ರೋಟರಿ ವರ್ಷದಲ್ಲಿ ಜಾರಿಗೆ ತಂದಿದೆ ಎಂದು ಮಾಹಿತಿ ನೀಡಿದರು.
ರೋಟರಿ ಜಿಲ್ಲಾ ಸಹಾಯಕ ರಾಜ್ಯಪಾಲ ಪಿ.ನಾಗೇಶ್ ಮಾತನಾಡಿ, ಸೇವ್ ಎ ಲೈಫ್ ಎಂಬ ಯೋಜನೆ ಯೊಂದಿಗೆ ರೋಟರಿಯು ಪ್ರಥಮ ಚಿಕಿತ್ಸೆಗೆ ಆದ್ಯತೆ ನೀಡಿದ್ದು ಪ್ರಥಮ ಚಿಕಿತ್ಸಾ ಕಾರ್ಯಾಗಾರಗಳೂ ಸೇರಿದಂತೆ ಅನೇಕ ಕಾರ್ಯಕ್ರಮಗಳ ಆಯೋಜನೆಯೊಂದಿಗೆ ಆಪತ್ಕಾಲದಲ್ಲಿ ಜೀವ ರಕ್ಷಣೆಗೆ ಈ ಯೋಜನೆ ಮೂಲಕ ಮುಂದಾಗಿದೆ ಎಂದು ಮಾಹಿತಿ ನೀಡಿದರು.
ರೋಟರಿ ಜೋನಲ್ ಲೆಫ್ಟಿನೆಂಟ್ ಕೇಶವಪ್ರಸಾದ್ ಮುಳಿಯ ಮಾತನಾಡಿ, ಪ್ರಾಥಮಿಕ ಹಂತ ದಲ್ಲಿಯೇ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ನೀಡುವ ಶಿಕ್ಷಕರ ವೇತನವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತಿಸಬೇಕಾಗಿದೆ. ಹಾಗಿದ್ದಾಗ ಮಾತ್ರ ಶಿಕ್ಷಕರ ವೃತ್ತಿಗೆ ಹೆಚ್ಚಿನ ಜನ ಬರಲು ಸಾಧ್ಯವಾಗುತ್ತದೆ. ವೇತನ ಪರಿಷ್ಕರಣೆಯಾಗದಿರುವದರಿಂದಾಗಿಯೇ ಮೊದಲಿನಂತೆಯೇ ಶಿಕ್ಷಣ ವೃತ್ತಿಯನ್ನು ಹೆಚ್ಚಿನವರು ಆದ್ಯತೆಯಾಗಿ ಪರಿಗಣಿಸುತ್ತಿಲ್ಲ ಎಂದು ಅಭಿಪ್ರಾಯಪಟ್ಟರು.
ಮಡಿಕೇರಿ ರೋಟರಿ ಅಧ್ಯಕ್ಷ ಕೆ.ಎಸ್.ರತನ್ ತಮ್ಮಯ್ಯ ಮಾತನಾಡಿ, ಮಡಿಕೇರಿ ರೋಟರಿ ಹಲವಾರು ಯೋಜನೆಗಳ ಮೂಲಕ ಜನಸೇವೆ ಯನ್ನು ಮಾಡುತ್ತಲೇ ಬಂದಿದೆ. 67 ವರ್ಷಗಳಿಂದ ಮಡಿಕೇರಿ ರೋಟರಿ ಜನಪರ ಕಾಳಜಿಯೊಂದಿಗೆ ಕಾರ್ಯಪ್ರವೃತ್ತವಾಗಿದೆ ಎಂದರು.
ಇದೇ ಸಂದರ್ಭ ಮಡಿಕೇರಿ ರೋಟರಿಯಿಂದ ಮರ್ಕೇರಿಯನ್ ವಾರ್ತಾಸಂಚಿಕೆಯನ್ನು ರಾಜ್ಯಪಾಲ ಜೋಸೆಫ್ ಮ್ಯಾಥ್ಯು ಅನಾವರಣ ಗೊಳಿಸಿದರು.
ಮಡಿಕೇರಿ ರೋಟರಿ ಕಾರ್ಯದರ್ಶಿ ಕೆ.ಎಸ್. ಕಾರ್ಯಪ್ಪ, ಮಾಜಿ ಜಿಲ್ಲಾ ಗವರ್ನರ್ ಮಾತಂಡ ಸುರೇಶ್ ಚಂಗಪ್ಪ, ಡಾ. ಸಿ.ಜಿ. ಕುಶಾಲಪ್ಪ, ಡಾ.ಪಾಟ್ಕರ್, ತಿಮ್ಮಯ್ಯ, ಎಂ. ಕರುಂಬಯ್ಯ ಸೇರಿದಂತೆ ರೋಟರಿಯ ಅನೇಕ ಹಿರಿಯ ಸದಸ್ಯರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸನ್ಮಾನ
ಮಡಿಕೇರಿ ರೋಟರಿ ಕ್ಲಬ್ ನಿಂದ ಮಡಿಕೇರಿಯ ಹಿರಿಯವೈದ್ಯ ಡಾ.ಎ.ಎನ್. ಗಣಪತಿ, ವಿಶಿಷ್ಟ ಸೇವಾ ಮೆಡಲ್ ಪಡೆದ ಕಂಡ್ರಂತಂಡ ಕರ್ನಲ್ ಸುಬ್ಬಯ್ಯ, ಡಾ.ಅನುಪಮಾ ಸಭಾಪತಿ ಅವರನ್ನು ಸನ್ಮಾನಿಸಲಾಯಿತು. ರೋಟರಿ ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥ್ಯು ಸಾಧಕರನ್ನು ಸನ್ಮಾನಿಸಿದರು.
ರೋಟರಿ ವಲಯ ಕಾರ್ಯ ದರ್ಶಿ ಅನಿಲ್ ಎಚ್.ಟಿ. ಮಾತನಾಡಿ, ಹೆಸರಾಂತ ವೈದ್ಯರಾದ ಡಾ. ಎ.ಎನ್. ಗಣಪತಿ ಅವರು ರೋಗಿಗಳ ಆರೈಕೆಯಲ್ಲಿಯೇ ದೇವರನ್ನು ಕಂಡುಕೊಂಡವರು. ಕಂಡ್ರತಂಡ ಕರ್ನಲ್ ಸುಬ್ಬಯ್ಯ ದೇಶರಕ್ಷಣೆ ಗಾಗಿಯೇ ಜೀವನ ಮುಡಿಪಾಗಿ ಟ್ಟವರು. ಶಿಕ್ಷಣ ಕ್ಷೇತ್ರದಲ್ಲಿ ಸಾಧಕರಾಗಿ ಡಾ.ಅನುಪಮಾ ಸಭಾಪತಿ ಖ್ಯಾತರಾಗಿದ್ದು ವಿವಿಧ ಕ್ಷೇತ್ರಗಳ ಈ ಸಾಧಕರನ್ನು ಸನ್ಮಾನಿಸುವ ಮೂಲಕ ಮಡಿಕೇರಿ ರೋಟರಿ ತನ್ನನ್ನು ಗೌರವಿಸಿ ಕೊಂಡಿದೆ ಎಂದು ಪ್ರಶಂಶಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಗಣಪತಿ, ರೋಟರಿ ಸದಸ್ಯನಾಗಿ ಸೇವಾ ಕಾರ್ಯ ಕೈಗೊಳ್ಳಬೇಕೆಂಬ ಅಭಿಲಾಶೆಯಿತ್ತು. ಆದರೆ ವೈದ್ಯ ವೃತ್ತಿಯ ಸಕ್ರಿಯತೆಯಿಂದಾಗಿ ಅವಕಾಶ ದೊರಕಲಿಲ್ಲ. ರೋಟರಿಯ ಸೇವಾ ಕಾರ್ಯಗಳು ಶ್ಲಾಘನೀಯ ಎಂದರು. ಸನ್ಮಾನಿತ ಕರ್ನಲ್ ಸುಬ್ಬಯ್ಯ ಮಾತನಾಡಿ, ಕೊಡಗಿನಲ್ಲಿ ಪ್ರಕೃತಿ ವಿಕೋಪ ಉಂಟಾದಾಗ ರೋಟರಿಯ ನೆರವು ಪ್ರಶಂಸನೀಯ. ಸರ್ಕಾರಕ್ಕೆ ಕಟ್ಟಿಕೊಡಲಾಗದ ಮನೆಗಳನ್ನು ರೋಟರಿ ಈಗಾಗಲೇ ನೀಡಿದ್ದು ಗಮನಾರ್ಹ. ಸರ್ಕಾರ ನಿರ್ಲಕ್ಷಿಸಿದ ಕ್ಷೇತ್ರಗಳಲ್ಲಿ ರೋಟರಿ ತನ್ನ ಸೇವಾ ಯೋಜನೆ ಮೂಲಕ ಸರ್ಕಾರವನ್ನೇ ಮೀರಿಸುವಂತ ಸಾಧನೆ ಮಾಡಿದೆ ಎಂದು ಶ್ಲಾಘಿಸಿದರು.