ವೀರಾಜಪೇಟೆ, ಅ. 5: ರಸ್ತೆ ಆಗಲೀಕರಣ ಹೋರಾಟ ಸಮಿತಿ ವತಿಯಿಂದ ರಸ್ತೆ ಅಗಲೀಕರಣ ಆಗಲೇಬೇಕು ಆಗ್ರಹಿಸಿ ಅಕ್ಟೋಬರ 9 ರಂದು ಬುಧವಾರ ಪಕ್ಷಾತೀತವಾಗಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಾಗುವದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಮೂಕೊಂಡ ಶಶಿ ಸುಬ್ರಮಣಿ ಹೇಳೀದರು.
ಪತ್ರಿಕೆಗೆ ಲಿಖಿತ ಮಾಹಿತಿ ನೀಡಿ ಸರ್ಕಾರದ ಪಟ್ಟಣದಲ್ಲಿ ರಸ್ತೆ ಕಿರಿದಾಗಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಸಾರ್ವಜ ನಿಕರಿಗೆ ಸುಗಮ ಸಂಚಾರ ಮತ್ತು ಪಾರ್ಕಿಂಗ್ ವ್ಯವಸ್ಥೆಗಾಗಿ ರಸ್ತೆ ಅಗಲಿಕರಣ ಅತ್ಯಾವಶ್ಯ. ಸರ್ಕಾರ ಹಾಗೂ ಸಂಭಂದ ಪಟ್ಟ ಇಲಾಖೆ ರಸ್ತೆ ಅಗಲೀಕರಣಕ್ಕೆ ಚಾಲನೆ ನೀಡುತ್ತಿದ್ದು ಕೆಲವು ಪಟ್ಟಭದ್ರ ಹಿತಾಶÀಕ್ತಿಗಳು ಅಗಲೀಕರಣಕ್ಕೆ ಅಡ್ಡಗಾಲು (ಮೊದಲ ಪುಟದಿಂದ) ಹಾಕುತ್ತಿದ್ದು ಪ್ರತಿಭಟನೆ ನಡೆಸಿ ಸರ್ಕಾರದ ಮೇಲೆ ಒತ್ತಡ ತರುವ ಹುನ್ನಾರ ನಡೆಸುತ್ತಿದ್ದಾರೆ. ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಇಂತಹ ಒತ್ತಡದ ಹುನ್ನಾರಕ್ಕೆ ಬಲಿಯಾಗಬಾರದು, ಮತ್ತು ರಸ್ತೆ ಅಗಲೀಕರಣ ಆಗಲೇ ಬೇಕು ಎಂದು ಹೇಳಿದರು.
ಪಟ್ರಪಂಡ ರಘು ನಾಣಯ್ಯ ಮಾತನಾಡಿ ರಸ್ತೆ ಅಗಲೀಕರಣ ವಿಚಾರದದಲ್ಲಿ ಶಾಸಕ ಕೆ.ಜಿ ಬೋಪಯ್ಯ ಅವರು ಪಟ್ಟಣದ ವರ್ತಕರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ರಸ್ತೆಯ ಮಧ್ಯಭಾಗದಿಂದ ಎರಡು 40 ಅಡಿಗಳನ್ನು ಬಿಟ್ಟು 30 ಅಡಿಗಳಷ್ಟು ಅಗಲೀಕರಣ ನಡೆಸುವದಾಗಿ ಇತ್ತೀಚೆಗೆ ಸಾರ್ವಜನಿಕ ಸಭೆ ಕರೆದು ಸಮ್ಮತ್ತಿ ಸೂಚಿಸಿದ್ದರು. ಆದರೆ ಕಳೆದ 2 ದಿನದ ಹಿಂದೆ ಕೆಲವು ವರ್ತಕರು ಹಾಗೂ ಕಟ್ಟಡ ಮಾಲೀಕರು ಸಾರ್ವಜನಿಕರನ್ನು ದಾರಿ ತಪ್ಪಿಸಿ ರಸ್ತೆ ಅಗಲೀಕರಣ ಬೇಡ ಒಂದು ಪ್ರತಿಭಟನೆ ನಡೆಸಿ ಶಾಸಕರು ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟಿಸಿದ್ದಾರೆ. ಸಾರ್ವಜನಿಕರ ಹಿತ ಕಾಯುವ ಶಾಸಕರು ಹಾಗೂ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದ ಕಾರಣ ಸರ್ಕಾರದ ನಿಯಮವನ್ನು ಪಾಲಿಸುವಂತೆ ಅಧಿಕಾರಿಗಳಿಗೆ ಒತ್ತಡ ಹೇರಲಾಗುವದು ಎಂದು ಹೇಳಿದರು.
ಮಂಡೇಟ್ಟಿರ ಅನಿಲ್ ಅಯ್ಯಪ್ಪ ಮಾತನಾಡಿ ರಸ್ತೆ ಅಗಲೀಕರಣ ಬೇಡ ಎಂದು ಹೇಳಿ ಪ್ರತಿಭಟನೆ ನಡೆಸಿದ ವ್ಯಕ್ತಿಗಳು ಸರ್ಕಾರದ ನಿಯಮವನ್ನು ಪಾಲಿಸಿ ಕಟ್ಟಡಗಳನ್ನು ಕಟ್ಟಿಕೊಂಡಿದ್ದಾರೆ. ಅವರು ಸುಕ್ಷಿತವಾಗಿ ಉಳಿದವರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದೇ ಸಂದರ್ಭ, ಅಂಜಪರವಂಡ ಅನಿಲ್, ಜೋಕಿಂ ರಾಡ್ರಿಗಾಸ್, ಮಾಳೆಟಿರ ಬೋಪಣ್ಣ, ಮತ್ತಿತರರು ಉಪಸ್ಥಿತರಿದ್ದರು.
ಬೆಂಬಲ: ರಸ್ತೆ ಅಗಲೀಕರಣ ಹೋರಾಟ ಸಮಿತಿ ನಡೆಸುವ ಪ್ರತಿಭಟನೆಗೆ ಬಸ್ಸ್ ಕಾರ್ಮಿಕರ ಸಂಘ, ಜಯ ಕರ್ನಾಟಕ ಸಂಘಟನೆ, ಕರ್ನಾಟಕ ರಕ್ಷಣಾ ವೇದಿಕೆ, ಮಾಜಿ ಸೈನಿಕರ ಸಹಕಾರ ಸಂಘ, ಆಟೋ ಚಾಲಕರ ಹಾಗೂ ಮಾಲೀಕರ ಸಂಘ ಬೆಂಬಲ ವ್ಯಕ್ತ ಪಡಿಸಿದೆ.