ಬಿಳುಗುಂದ, ಅ. 4: ಬಿಳುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ವಾರ್ಡ್ ಸಭೆ ತಾ. 9 ರಂದು ನಡೆಯಲಿದೆ ಎಂದು ಬಿಳುಗುಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.
ಬಿಳುಗುಂದ ಗ್ರಾಮದ ಸಭೆ ಬೆಳಿಗ್ಗೆ 10.30 ಗಂಟೆಗೆ ಮೇಕೇರಿ ಸಾಮೂಹಿಕ ಭವನದಲ್ಲಿ ಅಧ್ಯಕ್ಷ ಹೆಚ್.ಬಿ. ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ನಲ್ವತೋಕ್ಲು ಗ್ರಾಮದ ಸಭೆ ಅಪರಾಹ್ನ 12.30 ಗಂಟೆಗೆ ಪನ್ನಂಗೊಲ್ಲಿ ಅಂಗನವಾಡಿ ಕೇಂದ್ರ ನಲ್ವತೋಕ್ಲುವಿನಲ್ಲಿ ಚಿಲ್ಲವಂಡ ಪಿ. ಕಾವೇರಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಹೊಸಕೋಟೆ ಗ್ರಾಮದ ಸಭೆ ಹೊಸಕೋಟೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹೆಚ್.ಎನ್. ಸಕುಮ ಅಧ್ಯಕ್ಷತೆಯಲ್ಲಿ ನಡೆಯಲಿದೆ.