ವೀರಾಜಪೇಟೆ ಅ.4: ವೀರಾಜಪೇಟೆ ನಗರ ಪೊಲೀಸ್ ಠಾಣಾಧಿಕಾರಿಯಾಗಿ ಎಚ್. ಮರಿಸ್ವಾಮಿ ಅಧಿಕಾರ ವಹಿಸಿ ಕೊಂಡಿದ್ದಾರೆ. ಇವರು ಹಿಂದೆ ಪೊನ್ನಂಪೇಟೆಯಲ್ಲಿ ಹಾಗೂ ಶನಿವಾರಸಂತೆಯಲ್ಲಿ ಸೇವೆ ಸಲ್ಲಿಸಿದ್ದರು.
ವೀರಾಜಪೇಟೆ ನಗರ ಠಾಣೆ ಯಲ್ಲಿದ್ದ ಸಂತೋಶ್ ಕಶ್ಯಪ್ ಅವರು ಸರ್ಕಲ್ ಇನ್ಸ್ಪೆಕ್ಟರ್ ಆಗಿ ಬಡ್ತಿ ಹೊಂದಿ ಹಾಸನಕ್ಕೆ ತೆರಳಿದ ನಂತರ ಈ ಸ್ಥಾನ ತೆರವಾಗಿತ್ತು.