ಮಡಿಕೇರಿ, ಅ.4 : ಕೊಡವ ಸಮಾಜಗಳ ಒಕ್ಕೂಟದ ಪೊಮ್ಮಕ್ಕಡ ಕೂಟದ ವತಿಯಿಂದ ‘ಕೊಡವ ನಮ್ಮೆ’ಯ ಭಾಗವಾಗಿ ‘ಪೊಮ್ಮಕ್ಕಡ ನಮ್ಮೆ’ ತಾ.11 ರಂದು ಬಾಳುಗೋಡು ಕೊಡವ ಸಮಾಜದಲ್ಲಿ ನಡೆಯಲಿದೆ.

ನಮ್ಮೆಯಲ್ಲಿ ಕೊಡವ ಸಮುದಾಯದ ಎಲ್ಲಾ ಮಹಿಳೆಯರಿಗೆ ಹೂ ಜೋಡಣೆ ಸ್ಪರ್ಧೆ, ಡೆಸರ್ಟ್ ಮತ್ತು ಚಕ್ಕುಲಿ ತಿನಿಸುಗಳ ಪ್ರದರ್ಶನ ಹಾಗೂ ಸ್ಪರ್ಧೆ ನಡೆಯಲಿದೆ ಎಂದು ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಚೆರಿಯಪಂಡ ಇಮ್ಮಿ ಉತ್ತಪ್ಪ ತಿಳಿಸಿದ್ದಾರೆ.

ಆಸಕ್ತರು ತಾ. 9ರ ಒಳಗಾಗಿ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9741213440, 9448149064 ನ್ನು ಸಂಪರ್ಕಿಸಬಹುದಾಗಿದೆ.