ಸೋಮವಾರಪೇಟೆ, ಅ. 2: ಜನಸಂಖ್ಯಾ ನಿಯಂತ್ರಣಕ್ಕಾಗಿ ದೇಶಾದ್ಯಂತ ಸಮಾನ ನಾಗರಿಕ ಕಾನೂನನ್ನು ಜಾರಿಗೆ ತರಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಆಗ್ರಹಿಸಿದ್ದು, ಈ ಬಗ್ಗೆ ಪಟ್ಟಣದಲ್ಲಿ ಜಾಗೃತಿ ಅಭಿಯಾನ ನಡೆಯಿತು.

ಸಮಿತಿಯ ಪ್ರಮುಖರಾದ ಶಿವರಾಂ ಮಾತನಾಡಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‍ಮೋಹನ್ ರೆಡ್ಡಿ ಸರ್ಕಾರವು ಹಿಂದೂ ವಿರೋಧಿ ಕಾರ್ಯವನ್ನು ಮಾಡುತ್ತಿದ್ದು, ಹಿಂದೂ ದೇವಾಲಯಗಳ ಜಾಗವನ್ನು ವಶಪಡಿಸಿಕೊಳ್ಳಲು ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು. ಹಿಂದೂ ಜನಜಾಗೃತಿ ಸಮಿತಿಯ ಗಣೇಶ್, ವಿಜೇತ, ಸುರೇಶ್, ಅಭಿ, ರೋಹಿತ್, ಮೂರ್ತಿ, ಬಾಂಧವ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.