ಕುಶಾಲನಗರ, ಅ. 2: ಕರ್ನಾಟಕ ರಕ್ಷಣಾ ವೇದಿಕೆ ಕೊಡಗು ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಕುಶಾಲನಗರ ರಕ್ಷಣಾ ವೇದಿಕೆ ಕಚೇರಿಯಲ್ಲಿ ಜಿಲ್ಲಾ ಅಧ್ಯಕ್ಷರಾದ ಪಿ.ಕೆ.ಜಗದೀಶ್ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಕೊಡಗು ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ಎಚ್.ಎನ್.ರಮೇಶ್, ಯುವ ಘಕಟದ ಉಪಾಧ್ಯಕ್ಷರಾಗಿ ಕೆ.ಎಚ್.ಷರೀಫ್, ಕುಶಾಲನಗರ ಹೋಬಳಿ ಘಟಕ ಅಧ್ಯಕ್ಷರಾಗಿ ಬಿ.ಜೆ. ಅಣ್ಣಯ್ಯ, ಕುಶಾಲನಗರ ನಗರ ಘಟಕ ಅಧ್ಯಕ್ಷರಾಗಿ ಧನರಾಜ್, ಮಹಿಳಾ ಘಟಕದ ಅಧ್ಯಕ್ಷರಾಗಿ ಜಮೀಲ ಎ. ರಹೀಂ, ವಿರಾಜಪೇಟೆ ನಗರ ಅಧ್ಯಕ್ಷರಾಗಿ ಟಿ.ವಿ. ಅನಿಲ್‍ಕುಮಾರ್ ಅವರುಗಳನ್ನು ನೇಮಕ ಮಾಡಿ ನೇಮಕ ಪತ್ರ ನೀಡಲಾಯಿತು.
ಈ ಸಂದರ್ಭ ಕರವೇ ಪ್ರಮುಖರಾದ ಪ್ರಕಾಶ, ಕೆ.ಬಿ.ರವಿ, ಭೋಜಮ್ಮ, ಸೀತ ಇದ್ದರು.