ಮಡಿಕೇರಿ, ಅ. 2: ಮಡಿಕೇರಿ ನಗರ ದಸರಾ ಸಮಿತಿ, ದಸರಾ ಸಾಂಸ್ಕøತಿಕ ಸಮಿತಿ ವತಿಯಿಂದ ಮಡಿಕೇರಿ ಜನೋತ್ಸವ ಸಾಂಸ್ಕøತಿಕ ಕಾರ್ಯಕ್ರಮದಡಿ ಗಾಂಧಿಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ತಾ. 1 ರಂದು ಮಡಿಕೇರಿಯ ಕಿಂಗ್ಸ್ ಅಫ್ ಕೂರ್ಗ್ ತಂಡದಿಂದ ವೈವಿಧ್ಯಮಯ ನೃತ್ಯ, ಶಿರಸಿಯ ಸ್ಮಾರ್ಟ್‍ಗ್ರೂಪ್ ತಂಡದಿಂದ ನೃತ್ಯ ವೈವಿಧ್ಯ, ಕುಶಾಲನಗರದ ವಿಧುಷಿ ಮಂಜು ಭಾರ್ಗವಿ ತಂಡದಿಂದ ನೃತ್ಯ ಪ್ರದರ್ಶನ, ಸಮರ್ಥ ಕನ್ನಡಿಗ ತಂಡದಿಂದ ಸಾಂಸ್ಕøತಿಕ ಕಾರ್ಯಕ್ರಮ, ಮುತ್ತಾರ್ಮುಡಿಯ ಸಾಂಸ್ಕøತಿಕ ಕಲಾ ಬಳಗದಿಂದ ಅರೆಭಾಷಾ ಸಾಂಸ್ಕøತಿಕ ವೈವಿಧ್ಯ, ಅಂಬಳೆ ಹೇಮಂತ, ಹೇರಂಭ ಅವರಿಂದ ವೇಣುವಾದನ ಕಾರ್ಯಕ್ರಮಗಳು ಮೂಡಿಬಂದವು.