ಕೂಡಿಗೆ, ಅ. 2: ಕೂಡಿಗೆಯಲ್ಲಿನ ಟಾಟಾ ಕಾಫಿ ಸಂಸ್ಕರಣಾ ಘಟಕದ ಟಾಟಾ ವಾಲಿಂಟೀಯರ್ ಕ್ಲಬ್ ವತಿಯಿಂದ ಕೂಡಿಗೆ ಪ್ರಾಥಮಿಕ ಶಾಲೆ ಮತ್ತು ಶಿಕ್ಷಕರ ತರಬೇತಿ ಸಂಸ್ಥೆಯ ಆವರಣದಲ್ಲಿ ಶ್ರಮದಾನ ಮಾಡಲಾಯಿತು. ಟಾಟಾ ಕಾಫಿ ಸಂಸ್ಕರಣಾ ಘಟಕದ ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕರು, ಸಿಬ್ಬಂದಿ ವರ್ಗ, ಕಾರ್ಮಿಕ ವರ್ಗದವರು ಎಲ್ಲರನ್ನು ಒಳಗೊಂಡಂತೆ ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದ್ದಾರೆ.
ಅದರಂತೆ ಪ್ರಾಥಮಿಕ ಶಾಲೆ ಮತ್ತು ಡಯಟ್ ಮೈದಾನ, ಸುತ್ತಮುತ್ತಲ ಪ್ರದೇಶಗಳನ್ನು ಸ್ವಚ್ಛಗೊಳಿಸಿ ಶ್ರಮದಾನ ನಡೆಸಿದರು. ಈ ಸಂದರ್ಭ ಕೂಡಿಗೆ ಟಾಟಾ ಕಾಫಿ ಸಂಸ್ಕರಣಾ ಘಟಕದ ವ್ಯವಸ್ಥಾಪಕರು, ಸಹಾಯಕ ವ್ಯವಸ್ಥಾಪಕರು, ಸಿಬ್ಬಂದಿ ವರ್ಗ ಹಾಗೂ ಕಾರ್ಮಿಕ ವರ್ಗ ಇದ್ದರು.