*ಗೋಣಿಕೊಪ್ಪಲು, ಅ. 2: ಮೂರನೇ ದಿನ 41ನೇ ವರ್ಷದ ದಸರಾ ಜನೋತ್ಸವದ ನಾನಾ ಕಾರ್ಯಕ್ರಮದಲ್ಲಿ ಬದುಕು ಕೊಡವ ನಾಟಕ ಪ್ರದರ್ಶನಗೊಂಡಿತು.

ಸಜನ್ ರಾಧಕೃಷ್ಣ ಇವರಿಂದ ಹಾಡುಗಾರಿಕೆ ಹಾಗೂ ನಾಟ್ಯ ನಿನಾದ ನೃತ್ಯ ಶಾಲೆ, ವೀರಾಜಪೇಟೆ ರಂಜನಿಯವರಿಂದ ಓಲಗ ನೃತ್ಯ ಪ್ರದರ್ಶನ ನಡೆಯಿತು. ಚಕ್ಕೇರ ಪಂಚಮ್ ಬೋಪಣ್ಣ ಅವರಿಂದ ಕೊಡವ ಗೀತೆಗಳ ಸಂಗಮ ಕಾರ್ಯಕ್ರಮಗಳು ನಡೆಯಿತು.

ಇಂದಿನ ಕಾರ್ಯಕ್ರಮ: ಸಂಜೆ 6.30 ರಿಂದ 7.30ರವರೆಗೆ ತೋರದ ಗೋಪಮ್ಮ ಜಾನಪದ ಕಲಾವಿದ ತಂಡದಿಂದ ‘ಉರುಟಿಕೊಟ್ಟ್ ಆಟ್’, 8:30 ರಿಂದ 9:30ರವರೆಗೆ ಜಗನ್ಮೋಹನ ನಾಟ್ಯಾಲಯ ವೀರಾಜಪೇಟೆ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ, 9.30ರಿಂದ 11.30ರವರೆಗೆ ಅಂತರ್‍ರಾಷ್ಟ್ರೀಯ ಮಟ್ಟದ ಗಾಯಕರಾದ ಮೈಸೂರಿನ ಅಮ್ಮ ರಾಮಚಂದ್ರ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.

-ಎನ್.ಎನ್ ದಿನೇಶ್