ಮಡಿಕೇರಿ, ಅ. 2: ಮರಗೋಡಿನ ಭಾರತಿ ಸಂಯುಕ್ತ ಪದವಿಪೂರ್ವ ಕಾಲೇಜಿಗೆ ನೀರು ಶುದ್ಧೀಕರಿಸುವ ಯಂತ್ರ ವನ್ನು ಮಡಿಕೇರಿ ಇಸಿಹೆಚ್‍ಎಸ್ ಆಸ್ಪತ್ರೆಯ ಆಡಳಿ ತಾಧಿಕಾರಿ ಯಾಗಿರುವ ನಿವೃತ್ತ ಕರ್ನಲ್ ಪೋರೆಯಂಡ ಅಯ್ಯಪ್ಪ ಅವರು ಕೊಡುಗೆಯಾಗಿ ನೀಡಿದರು.

ಭಾರತಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪಿ.ಎಸ್. ರವಿಕೃಷ್ಣ ಅವರಿಗೆ ಶುದ್ಧೀಕರಣ ಯಂತ್ರವನ್ನು ಮಡಿಕೇರಿಯ ತಮ್ಮ ಕಚೇರಿಯಲ್ಲಿ ಹಸ್ತಾಂತರಿಸಿದರು.

ಹಲವಾರು ಕಾಯಿಲೆಗಳ ಮೂಲ ಅಶುದ್ಧ ನೀರು. ಶಾಲಾ ವಿದ್ಯಾರ್ಥಿಗಳು ಶುದ್ಧ ನೀರನ್ನು ಸೇವಿಸಿ ಸುಸ್ಥಿರ ಆರೋಗ್ಯವನ್ನು ಪಡೆಯಲಿ ಎಂಬ ಉದ್ದೇಶದಿಂದ ಗಂಟೆಗೆ 60 ಲೀಟರ್ ನೀರನ್ನು ಶುದ್ಧೀಕರಿಸುವ ಸಾಮಥ್ರ್ಯವುಳ್ಳ ಯಂತ್ರವನ್ನು ಶಾಲೆಗೆ ನೀಡುತ್ತಿರುವದಾಗಿ ಅವರು ತಿಳಿಸಿದರು