ಸೋಮವಾರಪೇಟೆ, ಅ. 2: ದಸರಾ ಪ್ರಯುಕ್ತ ಮಡಿಕೇರಿಯಲ್ಲಿ ನಡೆದ ಶಟಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಟ್ಟಣದ ಒಕ್ಕಲಿಗರ ಸಂಘದ ಕುವೆಂಪು ವಿದ್ಯಾಸಂಸ್ಥೆಯ ಬಾಲಕಿಯರ ತಂಡ ನಾಲ್ಕು ಬಹುಮಾನ ಗಳಿಸಿದೆ.

13 ವರ್ಷಗಳ ಬಾಲಕಿರ ವಿಭಾಗದ ಡಬಲ್ಸ್‍ನಲ್ಲಿ ವೈ.ಎಸ್. ಧನ್ಯ, ಪುಷ್ಪಾಂಜಲಿ ತಂಡ ಪ್ರಥಮ ಸ್ಥಾನಗಳಿಸಿದೆ. ಕೃತಿ ಹಾಗೂ ಬಿಂದು ತಂಡ ದ್ವಿತೀಯ ಸ್ಥಾನ ಗಳಿಸಿದೆ. ಸಿಂಗಲ್ಸ್‍ನಲ್ಲಿ ವೈ.ಎಸ್. ಧನ್ಯ ದ್ವಿತೀಯ ಹಾಗೂ 19 ವರ್ಷ ಒಳಗಿನ ವಿಭಾಗದಲ್ಲಿ ಎಂ.ಆರ್. ಯಶಸ್ವಿನಿ ಹಾಗೂ ವೈ.ಎಸ್. ಧನ್ಯ ತಂಡ ದ್ವಿತೀಯ ಸ್ಥಾನಗಳಿಸಿದ್ದಾರೆ.

ಶಾಲೆಯ ಮುಖ್ಯ ಶಿಕ್ಷಕಿ ಮಿಲ್ಡ್ರೆಡ್ ಗೋನ್ಸಾಲ್ವೆಸ್, ದೈಹಿಕ ಶಿಕ್ಷಣ ಶಿಕ್ಷಕಿ ಇಂದಿರಾ ತರಬೇತಿ ನೀಡಿದ್ದಾರೆ.