ಗುಡ್ಡೆಹೊಸೂರು, ಅ. 2: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಸಮುದಾಯ ಭವನದಲ್ಲಿ ಗುಡ್ಡೆಹೊಸೂರು ಪಂಚಾಯಿತಿ ವ್ಯಾಪ್ತಿಯ ಮತ್ತು ನಂಜರಾಯಪಟ್ಟಣ ವರ್ತುಲದ ಕಾರ್ಯಕ್ರಮ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಡೆಯಿತು.
ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಎಸ್. ಭಾರತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವಿಭಾಗದ ಆರೋಗ್ಯ ಕಾರ್ಯಕರ್ತೆಯರಾದ ಭವಾನಿ ಮತ್ತು ಸೌಮ್ಯ ಕಾರ್ಯಕ್ರಮದ ಉದ್ದೇಶ ಮತ್ತು ಅನುಸರಿಸುವ ವಿಧಾನವನ್ನು ವಿವರಿಸಿದರು. ಸಭೆಯಲ್ಲಿ ಗರ್ಭಿಣಿಯರು ಮತ್ತು ಮಕ್ಕಳು ಹಾಜರಿದ್ದರು. ಕಾರ್ಯಕ್ರಮದಲ್ಲಿ 5 ಮಂದಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ವಿವಿಧ ಸ್ತ್ರೀಶಕ್ತಿ ಸಂಘಗಳ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದು, ಮಾಹಿತಿ ಪಡೆದುಕೊಂಡರು. ವಿವಿಧ ರೀತಿಯ ಪೌಷ್ಟಿಕ ಆಹಾರ ತಿಂಡಿಗಳು, ಮೊಳಕೆ ಕಾಳುಗಳು, ತರಕಾರಿ, ಹಣ್ಣುಗಳು, ವಿವಿಧ ರೀತಿಯ ಸೊಪ್ಪುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಈ ಸಂದರ್ಭ ಅನುಗ್ರಹ ಎಂಬ ಮಹಿಳಾ ಗುಂಪನ್ನು ರಚನೆ ಮಾಡಲಾಯಿತು. ವೇದಿಕೆಯಲ್ಲಿ ಗುಡ್ಡೆಹೊಸೂರು ಗ್ರಾ.ಪಂ. ಸದಸ್ಯರಾದ ಕವಿತಾ, ಪುಷ್ಪ, ಡಾಟಿ ಉಪಸ್ಥಿತರಿದ್ದರು. ವಿಭಾಗೀಯ ಮಟ್ಟದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆಶಾಕಾರ್ಯಕರ್ತೆಯರು ಮತ್ತು 100ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.
ಅಂಗನವಾಡಿ ಕಾರ್ಯಕರ್ತೆ ಭವ್ಯ ಸ್ವಾಗತಿಸಿ, ರುಕ್ಮಿಣಿ ಪ್ರಾರ್ಥಿಸಿದರು, ಅಂಗನವಾಡಿ ಶಿಕ್ಷಕಿ ಲತಾ, ರೂಪ, ಕವಿತಾ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಮಕ್ಕಳಿಗೆ ಅನ್ನಪ್ರಸನಃ ಕಾರ್ಯಕ್ರಮ ಮಾಡಲಾಯಿತು.