ಶ್ರೀಮಂಗಲ, ಅ. 2: ಕೊಡವರು ತಮ್ಮ ಸಂಸ್ಕøತಿಯ ಮಹತ್ವವನ್ನು ಅರಿತು ಹಬ್ಬಗಳನ್ನು ಅರ್ಥಪೂರ್ಣ ವಾಗಿ ಆಚರಿಸಬೇಕು. ಹಬ್ಬಗಳ ಆಚರಣೆಯಿಂದ ಸಂಸ್ಕøತಿ ಉಳಿಯಲು ಸಾಧ್ಯವಾಗುತ್ತದೆ. ಹಿಂದೆ ಕೊಡವರು ಹಬ್ಬಗಳನ್ನು ಮನೆಗಳಲ್ಲಿ ಆಚರಿಸುತ್ತಿದ್ದರು. ಇದೀಗ ಮನೆಗಳಲ್ಲಿ ಆಚರಿಸುವದರೊಂದಿಗೆ ಸಾರ್ವತ್ರಿ ಕವಾಗಿ ಆಚರಿಸುತ್ತಿರುವದರಿಂದ ಸಂಸ್ಕøತಿಯ ಮಹತ್ವ ತಿಳಿಯಲಿದೆ ಎಂದು ರಿವರ್ಸೈಡ್ ಅಸೋಸಿ ಯೇಷನ್ನ ಅಧ್ಯಕ್ಷ ಮೀದೇರಿರ ಬಿ. ಸುರೇಶ್ ಅಭಿಪ್ರಾಯ ಪಟ್ಟರು.
ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಪೊರಾಡು ಗ್ರಾಮದ ರಿವರ್ಸೈಡ್ ಅಸೋಸಿಯೇಷನ್ ವತಿಯಿಂದ ನಡೆದ ಕೈಲ್ ಪೊಳ್ದ್ ಸಂತೋಷ ಕೂಟದ ಕ್ರೀಡಾ ಕಾರ್ಯಕ್ರಮವನ್ನು ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವದು ಸೇರಿದಂತೆ ಮಹಿಳೆÉಯರು ಮತ್ತು ಮಕ್ಕಳಿಗೆ ಕ್ರೀಡಾ ಸ್ಪರ್ಧೆಯನ್ನು ಏರ್ಪಡಿಸಿದರು. ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಬಲ್ಯಮೀದೇರಿರ ಸಂಪತ್ ಪ್ರಥಮ ಮತ್ತು ಮೀದೇರಿರ ಸಿ. ಸೋಮಣ್ಣ ದ್ವಿತೀಯ ಬಹುಮಾನ ಪಡೆದರು.
ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಊಟೋಪಚಾರ ಏರ್ಪಡಿಸಲಾಗಿತ್ತು. ಸಂಸ್ಥೆಯ ಕಾರ್ಯದರ್ಶಿ ಬಲ್ಯಮೀದೇರಿರ ಶರಣ್ ಚಂಗಪ್ಪ ಸ್ವಾಗತಿಸಿ ವಂದಿಸಿದರು.