ಮಡಿಕೇರಿ, ಸೆ.30: ಮಡಿಕೇರಿ ಯುವ ದಸರಾ ಪ್ರಯುಕ್ತ ತಾ. 5ರಂದು ದ್ವಿಚಕ್ರ ಹಾಗೂ ನಾಲ್ಕು ಚಕ್ರದ ಆಕರ್ಷಕ ವಿನ್ಯಾಸಗೊಳಿಸಿದ ವಾಹನಗಳ ಮೆರವಣಿಗೆಯನ್ನು ನಗರದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಆಸಕ್ತರು ತಾ.3ರ ರೊಳಗೆ ಹೆಸರು ನೋಂದಾಯಿಸಿ ಕೊಳ್ಳುವಂತೆ ಯುವ ದಸರಾ ಸಮಿತಿ ಕೋರಿದೆ. ಹೆಚ್ಚಿನ ಮಾಹಿತಿಗೆ 7829131743, 9448066599 ಸಂಪರ್ಕಿಸಬಹುದಾಗಿದೆ.

ಹಾಗೆಯೇ ಮಿಸ್ಟರ್ ಮಡಿಕೇರಿ ಮತ್ತು ಮಿಸ್ ಮಡಿಕೇರಿ ಸ್ಪರ್ಧೆಯಲ್ಲಿ 18 ರಿಂದ 26 ವರ್ಷದೊಳಗಿನ ಯುವಕ/ ಯುವತಿಯರು ಪಾಲ್ಗೊಳ್ಳಬಹುದಾಗಿದ್ದು, ಹೆಚ್ಚಿನ ಮಾಹಿತಿಗೆ 7760050192 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.