*ಗೋಣಿಕೊಪ್ಪಲು, ಸೆ. 30: 41ನೇ ವರ್ಷದ ಗೋಣಿಕೊಪ್ಪಲು ದಸರಾ ಜನೋತ್ಸವದ ಬಹುಭಾಷ ಕವಿಗೋಷ್ಠಿ ತಾ. 2ರಂದು ಸರ್ಕಾರಿ ಪ್ರಾಥಮಿಕ ಶಾಲೆಯ ಶ್ರೀ. ಕಾವೇರಿ ಕಲಾವೇದಿಕೆಯಲ್ಲಿ ನಡೆಯಲಿದೆ. 60ಕ್ಕೂ ಹೆಚ್ಚು ಕವಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚಿಸಲಿದ್ದಾರೆ.

ಅಂದು ಬೆಳಿಗ್ಗೆ 10 ಗಂಟೆಗೆ ಕವಿಗೋಷ್ಠಿ ದಸರಾ ಬಹುಭಾಷ ಕವಿಗೋಷ್ಠಿ ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ಅಧ್ಯಕ್ಷತೆಯಲ್ಲಿ ಹಿರಿಯ ಸಾಹಿತಿಗಳಾದ ಮೊಣ್ಣಂಡ ಶೋಭ ಸುಬ್ಬಯ್ಯ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಸಾಹಿತಿ ಡಾ. ಜೆ. ಸೋಮಣ್ಣ ಭಾಗವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಕಾವೇರಿ ಕಾಲೇಜು ಪ್ರಾಂಶುಪಾಲರಾದ ಇಟ್ಟೀರ ಕಮಲಾಕ್ಷಿ ಬಿದ್ದಪ್ಪ, ಹಾಗೂ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕೆ.ಜಿ. ರಾಮಕೃಷ್ಣ, ಕಾರ್ಯಾಧ್ಯಕ್ಷ ಕೆ.ಪಿ. ಬೋಪಣ್ಣ ಉಪಸ್ಥಿತರಿರುವರು.

ಗೋಣಿಕೊಪ್ಪಲು ದಸರಾ ಬಹುಭಾಷಾ ಕವಿಗೋಷ್ಠಿಗೆ ಸುಮಾರು 150ಕ್ಕೂ ಹೆಚ್ಚು ಕವಿತೆಗಳನ್ನು ಜಿಲ್ಲೆಯ ಕವಿ, ಕವಯತ್ರಿಯರಿಂದ ಬಂದಿದ್ದವು. ಅದರಲ್ಲಿ ಸುಮಾರು 60 ಕವಿತೆಗಳನ್ನು ಆಯ್ದು ಹಿರಿಯ - ಕಿರಿಯ ಕವಿಗಳಿಗೆ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಕವಿಗೋಷ್ಠಿ ಸಂಚಾಲಕ ಜಗದೀಶ್ ಜೋಡುಬೀಟಿ ತಿಳಿಸಿದ್ದಾರೆ.

ಕವಿಗೋಷ್ಠಿಯಲ್ಲಿ ವಿ.ಟಿ ಶ್ರೀನಿವಾಸ್, ಕೆ.ಆರ್. ಮನ, ಸೈಮನ್ ಎಸ್., ಕೊಟ್ಟಕೇರಿಯನ ಲೀಲಾ ದಯಾನಂದ, ಸಿ. ವಾಣಿ ರಾಘವೇಂದ್ರ, ಅಬ್ದುಲ್ಲಾ, ಎಸ್.ಕೆ. ಈಶ್ವರಿ, ಹೇಮಲತಾ ಪೂರ್ಣಪ್ರಕಾಶ್, ಹೆಚ್.ವಿ. ಶಿವಾನಂದ, ಜಯ ನಾಯಕ್, ತೆಕ್ಕಡೆ ಬಿ. ಕುಮಾರಸ್ವಾಮಿ, ಆಶಾರಾಣಿ, ಸತೀಶ್ ಕುಮಾರ್ ಎ.ಹೆಚ್, ಬಿನ್ಸಿ ಎಂ.ಆರ್, ವೈಷ್ಣವಿ ಡಿ.ಪಿ., ನಳಿನಿ ಕೆ.ಎಸ್., ಕಿಶೋರ್ ಕುಮಾರ್, ವೀಣಾ ಎನ್.ರಾವ್., ಸುಕುಮಾರ್, ಉಳುವಂಗಡ ಕಾವೇರಿ, ಜಶ್ಮಿ ಕಲ್ಲುಮುಟ್ಲು, ಶಶಿಕಿರಣ್ ಎಸ್.ಆರ್., ಪಿ.ಯು. ಸುಂದರ, ಹೆಚ್.ವಿ. ಸುನಿತಾ ವಿಶ್ವನಾಥ್, ಡೀನ್ ಸಾಲ್ವೋ ಡಿಸೋಜ, ಮುಕ್ಕಾಟಿ ಹರಿಣಿ ಗಿರೀಶ್, ಮೂಟೆರ ಗೋಪಾಲಕೃಷ್ಣ, ಮುರುವಂಡ ಸೋಮಣ್ಣ, ಮೀರ್ಕಜೆ ಲೋಹಿತ್ ಸೋಮಯ್ಯ, ಚಾಲ್ರ್ಸ್ ಡಿಸೋಜಾ, ಸಾವಿತ್ರಿ ಹೆಚ್.ಜೆ., ಮಳುವಂಡ ನಳಿನಿ ಬಿಂದು, ವಿ. ಶ್ರೀನಿವಾಸ್, ಕೆ.ಟಿ ವಾತ್ಸಲ್ಯ, ಜೆ.ಪಿ ಹೇಮಾವತಿ, ಸಣ್ಣುವಂಡ ಕಿಸು ದೇವಯ್ಯ, ಕಾಯಪಂಡ ಬಿ. ಟಾಟ ಚೆಂಗಪ್ಪ, ಲವಿನ್ ಲೋಪೇಸ್, ಕವನ ಆಚಾರ್ಯ, ರಾಚು ಶ್ಯಾಮ್, ಎಸ್.ಆರ್ ರವಿ, ಎಂ.ಎಸ್. ಪುರುಷೋತ್ತಮ ಕೆ.ವಿ. ಪುಟ್ಟಣ್ಣ ಆಚಾರ್ಯ, ಸುದರ್ಶನ್ ಕುಸುಬೂರ್, ದೀಪಿಕಾ ಸುದರ್ಶನ್, ಚಿಮ್ಮಚ್ಚೀರ ಪವಿತಾ ರಂಜನ್, ಎ.ವಿ. ಮಂಜುನಾಥ್, ಎಂ.ಕೆ. ನಳಿನಾಕ್ಷಿ, ವತ್ಸಲಾ ಶ್ರೀಶಾ, ಟಾಮಿ ಥೋಮಸ್, ವೈಲೇಶ್, ಹಾ.ತಿ. ಜಯಪ್ರಕಾಶ್, ಮೂಡಗದ್ದೆ ವಿಕ್ರಮ್, ರಂಜಿತಾ ಕಾರ್ಯಪ್ಪ, ಕಡ್ಲೇರ ಜಯಲಕ್ಷ್ಮಿ ಮೋಹನ್, ಚಮ್ಮಟೀರ ಪ್ರವೀಣ್ ಉತ್ತಪ್ಪ, ಮುಲ್ಲೇಂಗಡ ರೇವತಿ ಪೂವಯ್ಯ, ಚೆಟ್ಟಂಗಡ ರವಿ ಸುಬ್ಬಯ್ಯ, ಮುಲ್ಲೇಂಗಡ ಮಧೋಶ್ ಪೂವಯ್ಯ, ಕವಿತೆಗಳನ್ನು ವಾಚಿಸಲಿದ್ದಾರೆ ಎಂದು ತಿಳಿಸಿದ್ದಾರೆ. -ಎನ್.ಎನ್ ದಿನೇಶ್