ಮಡಿಕೇರಿ, ಅ. 1: ಶಿವಮೊಗ್ಗದಲ್ಲಿ ಜರುಗಿದ ಪ್ರೌಢಶಾಲಾ ವಿಭಾಗದ ರಾಜ್ಯಮಟ್ಟದ ಫುಟ್‍ಬಾಲ್ ಸ್ಪರ್ಧೆಯ ಬಾಲಕಿಯರ ವಿಭಾಗದಲ್ಲಿ ಸ್ಪರ್ಧಿಸಿದ್ದ ಜಿಲ್ಲೆಯ ವಿದ್ಯಾರ್ಥಿನಿ, ಕಡಗದಾಳು ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ. ಮುಕ್ಕಾಟಿರ ಕಾವ್ಯಶ್ರೀ ರಾಷ್ಟ್ರೀಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಫೈನಲ್ ಪಂದ್ಯದಲ್ಲಿ ಕಾವ್ಯಶ್ರೀ ಉತ್ತಮ ಪ್ರದರ್ಶನ ತೋರಿದ್ದಾಳೆ.
ಈ ಸ್ಪರ್ಧೆಯಲ್ಲಿ ಈಕೆ ಪ್ರತಿನಿಧಿಸಿದ್ದ ತಂಡ 3-2 ಗೋಲಿನಿಂದ ಬೆಂಗಳೂರು ತಂಡವನ್ನು ಪರಾಭವಗೊಳಿಸಿ ರಾಜಸ್ಥಾನದಲ್ಲಿ ಜರುಗಲಿರುವ ರಾಷ್ಟ್ರೀಯ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾಳೆ. ಕಡಗದಾಳು ಸರಕಾರಿ ಪ್ರೌಢಶಾಲೆಯಾಗಿದ್ದು, ಇಲ್ಲಿನ ವಿದ್ಯಾರ್ಥಿನಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವ ಬಗ್ಗೆ ಶಿಕ್ಷಕವೃಂದ ಸಂತಸ ವ್ಯಕ್ತಪಡಿಸಿದೆ. ಕಾವ್ಯಶ್ರೀ ಮುಕ್ಕಾಟಿರ ದೇವಯ್ಯ ಅವರ ಪುತ್ರಿ.