ಸೋಮವಾರಪೇಟೆ, ಅ. 1: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮಾರ್ಷಯಲ್ ಆಟ್ರ್ಸ್ ಮತ್ತು ಯೋಗ ಸಂಸ್ಥೆಯ ತರಬೇತುದಾರ ಪ್ರಮೋದ್ ಪ್ರಥಮ ಸ್ಥಾನಗಳಿಸಿದ್ದಾರೆ.
ಇವರು ಕೂಡಿಗೆಯ ಆ್ಯಂಜಲ್ ವಿದ್ಯಾನಿಕೇತನ ಹಾಗೂ ಗುಡ್ಡೆಹೊಸೂರಿನ ಉದ್ಗಮ್ ಮೊಂಟೆಸರಿಸ್ ಶಾಲೆಯಲ್ಲಿ ಕರಾಟೆ ಮತ್ತು ಯೋಗ ತರಬೇತುದಾರರಾಗಿದ್ದಾರೆ. ಸೌತ್ ಏಷಿಯನ್ ಯೋಗ ಚಾಂಪಿಯನ್ ಶಿಪ್‍ನಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ಪ್ರಮೋದ್ ಅವರು ಯಡವನಾಡು ಗ್ರಾಮದ ಮಣಿ ಮತ್ತು ಪ್ರಭಾಕರ್ ಅವರ ಪುತ್ರ.