ಮಡಿಕೇರಿ, ಸೆ. 30: ಮೊನ್ನೆ ರಾತ್ರಿ ಮಂಗಳೂರು ಸಮೀಪದ ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೇತ್ರಾವತಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ಕಲ್ಮಾಡಂಡ ಕೌಶಿಕ್ ಮಂದಣ್ಣ ಶವವು ಇನ್ನು ಪತ್ತೆಯಾಗಿಲ್ಲ ಎಂದು ಬಂಟ್ವಾಳ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಖಚಿತಪಡಿಸಿದ್ದಾರೆ.

ನೇತ್ರಾವತಿ ಹೊಳೆಯುದ್ದಕ್ಕೂ ಯುವಕನ ಶವಕ್ಕಾಗಿ ಪೊಲೀಸ್, ಅಗ್ನಿಶಾಮಕದಳ, ಎನ್‍ಡಿಆರ್‍ಎಫ್ ಜಂಟಿ ಕಾರ್ಯಾಚರಣೆ ಮುಂದುವರೆಸಿದ್ದು; ಈ ಸಂಜೆಯ ತನಕ ಯಾವದೇ ಮಾಹಿತಿ ಲಭಿಸಿಲ್ಲ ಎಂದು ಅವರು ‘ಶಕ್ತಿ’ಯೊಂದಿಗೆ ತಿಳಿಸಿದ್ದಾರೆ. ಈ ನಡುವೆ ಮೃತರಾದ ಕವಿತಾ ಮಂದಣ್ಣ ಹಾಗೂ ಪುತ್ರಿ ಕಲ್ಪಿತಾ ಇವರುಗಳ ಶವಗಳ ಅಂತ್ಯಸಂಸ್ಕಾರವು ಇಂದು ಬಂಧುಗಳ ಸಮ್ಮುಖ ಮಂಗಳೂರಿನಲ್ಲಿ ನಡೆದಿದೆ. ಮೃತ ಕಿಶನ್ ಮಂದಣ್ಣ ಅಂತ್ಯಸಂಸ್ಕಾರ ಮೈಸೂರಿನಲ್ಲಿ ನೆರವೇರಿಸಲಾಗಿದೆ ಎಂದು ಅಲ್ಲಿನ ಮೂಲಗಳು ತಿಳಿಸಿವೆ. ಪ್ರಕರಣ ಸಂಬಂಧ ಪೊಲೀಸ್ ತನಿಖೆ ಮುಂದುವರಿದಿದೆ.