ಮಡಿಕೇರಿ, ಸೆ. 30: ಜನಜಾಗೃತಿ ಸಮಿತಿ ಸಂಪಾಜೆ ಕೊಡಗು ವತಿಯಿಂದ ಬಾಲಚಂದ್ರ ಕಳಗಿ ಹತ್ಯೆಯ ಸಮಾಜ ಘಾತುಕ ಶಕ್ತಿಗಳ ವಿರುದ್ಧ ಜನ ಜಾಗೃತಿ ಸಭೆ ನಡೆಯಿತು. ಸಂಪಾಜೆ ಗೇಟಿನಿಂದ ಮುಖ್ಯ ರಸ್ತೆಯಲ್ಲಿ ಬೃಹತ್ ಜನ ಜಾಗೃತಿ ಜಾಥಾದೊಂದಿಗೆ ಕೊಯನಾಡಿಗೆ ತೆರಳಿ ಕೊಯನಾಡಿನ ಶ್ರೀ ಗಣೇಶ ಕಲಾಮಂದಿರದಲ್ಲಿ ಸಭೆ ನಡೆಯಿತು.ಕರ್ನಾಟಕ ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ಮಾತನಾಡಿ, ಕಳಗಿಯ ವರನ್ನು ಕಳೆದು ಕೊಂಡಿರುವದು ಭಾರತೀಯ ಜನತಾ ಪಾರ್ಟಿ ಮತ್ತು ಇಲ್ಲಿನ ಗ್ರಾಮಸ್ಥರಿಗೆ ಉಂಟಾದ ನಷ್ಟ. ಈ ಕೊಲೆಯ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಿ.ಬಿ.ಐ. ತನಿಖೆಗೆ ವಹಿಸುತ್ತೇವೆ ಎಂದು ಭರವಸೆ ನೀಡಿದರು.ಶಾಸಕÀ ಅಪ್ಪಚ್ಚು ರಂಜನ್ ಮಾತನಾಡಿ, ಸಮಾಜ ಘಾತುಕ ಮಡಿಕೇರಿ, ಸೆ. 30: ಜನಜಾಗೃತಿ ಸಮಿತಿ ಸಂಪಾಜೆ ಕೊಡಗು ವತಿಯಿಂದ ಬಾಲಚಂದ್ರ ಕಳಗಿ ಹತ್ಯೆಯ ಸಮಾಜ ಘಾತುಕ ಶಕ್ತಿಗಳ ವಿರುದ್ಧ ಜನ ಜಾಗೃತಿ ಸಭೆ ನಡೆಯಿತು. ಸಂಪಾಜೆ ಗೇಟಿನಿಂದ ಮುಖ್ಯ ರಸ್ತೆಯಲ್ಲಿ ಬೃಹತ್ ಜನ ಜಾಗೃತಿ ಜಾಥಾದೊಂದಿಗೆ ಕೊಯನಾಡಿಗೆ ತೆರಳಿ ಕೊಯನಾಡಿನ ಶ್ರೀ ಗಣೇಶ ಕಲಾಮಂದಿರದಲ್ಲಿ ಸಭೆ ನಡೆಯಿತು.

ಕರ್ನಾಟಕ ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ಮಾತನಾಡಿ, ಕಳಗಿಯ ವರನ್ನು ಕಳೆದು ಕೊಂಡಿರುವದು ಭಾರತೀಯ ಜನತಾ ಪಾರ್ಟಿ ಮತ್ತು ಇಲ್ಲಿನ ಗ್ರಾಮಸ್ಥರಿಗೆ ಉಂಟಾದ ನಷ್ಟ. ಈ ಕೊಲೆಯ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಿ.ಬಿ.ಐ. ತನಿಖೆಗೆ ವಹಿಸುತ್ತೇವೆ ಎಂದು ಭರವಸೆ ನೀಡಿದರು.

ಶಾಸಕÀ ಅಪ್ಪಚ್ಚು ರಂಜನ್ ಮಾತನಾಡಿ, ಸಮಾಜ ಘಾತುಕ ಅನಿವಾರ್ಯ ಆದರೆ ಕಳಗಿ ಸಾವು ಊಹಿಸಲು ಅಸಾಧ್ಯ ಇದೊಂದು ವ್ಯವಸ್ಥಿತ ಸಂಚು ಇದರ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಲೇಬೇಕು ಎಂದರು.

ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ವಿಶ್ವ ಹಿಂದೂ ಪರಿಷತ್‍ನ ವಿಭಾಗ ಕಾರ್ಯದರ್ಶಿ ಶರಣ್ ಪಂಪವೆಲ್ ಮಾತನಾಡಿ, ನನ್ನ ಊರು, ನನ್ನ ಸಮಾಜ ಚೆನ್ನಾಗಿರಬೇಕು ಎಂಬ ಆಕಾಂಕ್ಷೆ ಇರುವ ವ್ಯಕ್ತಿಯನ್ನು ಕಳೆದು ಕೊಂಡಿರುವದು ಬೇಸರದ ಸಂಗತಿ. ತಾಕತ್ತು ಅನ್ನೋದು ಇದ್ದರೆ ಎದುರು ನಿತ್ತು ಹೋರಾಟ ಮಾಡಬೇಕು ಅದನ್ನು ಬಿಟ್ಟು ಕಳಗಿಯವರನ್ನು ಹತ್ಯೆ ಮಾಡಿರುವದು ದುಷ್ಟತನ, ಈ ಕೃತ್ಯ ನಡೆಸಿದ

(ಮೊದಲ ಪುಟದಿಂದ) ಆರೋಪಿಗಳನ್ನು ಸಮಾಜದಿಂದ ಸಂಪೂರ್ಣ ಬಹಿಷ್ಕಾರ ಹಾಕುವ ಕೆಲಸವನ್ನು ಮಾಡಬೇಕು. ಕಳಗಿ ಸಾವಿಗೆ ಸೂಕ್ತ ನ್ಯಾಯ ಸಿಗುವವರೆಗೂ ಹೋರಾಟಕ್ಕೆ ವಿಶ್ವ ಹಿಂದೂ ಪರಿಷತ್, ಭಜರಂಗದಳ ಬೆಂಬಲ ನೀಡುತ್ತದೆ ಎಂದು ಭರವಸೆ ನೀಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಭೆಯಲ್ಲಿ ರಮಾದೇವಿ ಬಾಲಚಂದ್ರ ಕಳಗಿ, ವೆಂಕಪ್ಪ ಕಳಗಿ, ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಸುಳ್ಯ ತಾಲೂಕಿನ ಬಿಜೆಪಿ ಪ್ರಮುಖರಾದ ವೆಂಕಟ್ ವಲಳಂಬೆ, ವೆಂಕಟ್ ದಂಬೆಕೋಡಿ, ಹರೀಶ್ ಕಂಜಿಪಿಲಿ, ಗಣಪತಿ ಭಟ್, ಎನ್.ಎ ರಾಮಚಂದ್ರ, ಲತೀಶ್ ಗುಂಡ್ಯ, ಚಂದ್ರಶೇಖರ್, ಎ.ವಿ. ತೀರ್ಥರಾಮ, ಕೆ.ಪಿ.ಜಗದೀಶ್, ಪುಷ್ಪಾಮೇದಪ್ಪ, ಕೊಡಗು ಜಿಲ್ಲಾ ಬಿಜೆಪಿ ಪ್ರಮುಖರಾದ ಶಾಂತೆಯಂಡ ರವಿ ಕುಶಾಲಪ್ಪ, ತಳೂರು ಕಿಶೋರ್ ಕುಮಾರ್, ಅಜಿತ್ ಕುಕ್ಕೆರ, ಧನಂಜಯ ಅಗೋಳಿಕಜೆ, ತೆಕ್ಕಡೆ ಶೋಭಾ ಮೋಹನ್, ಕವಿತಾ ಪ್ರಭಾಕರ್, ಅರುಣ್ ಭೀಮಯ್ಯ, ಅಪ್ಪಣ್ಣ, ನಾಗೇಶ್ ಕುಂದಲ್ಪಾಡಿ, ಸುಬ್ರಮಣ್ಯ ಉಪಾಧ್ಯಾಯ, ರಾಜಾರಾಮ್ ಕಳಗಿ, ಸಂಪಾಜೆ ಗ್ರಾಮ ಮತ್ತು ಸಂಪಾಜೆ ಹೋಬಳಿಯ ಪ್ರಮುಖ ಎನ್.ಎಸ್ ದೇವಿಪ್ರಸಾದ್, ಪಂಚಾಯತ್ ಉಪಾಧ್ಯಕ್ಷ ಸುಂದರ್ ಬಿಸಿಲುಮನೆ, ಮಿನಾಕುಮಾರಿ, ರವಿಪ್ರಕಾಶ್ ಕುದ್ಕುಳಿ, ಭರತ್ ಕೇನಾಜೆ, ವೀರೇಂದ್ರ ಕೇಳಾಜೆ, ತೀರ್ಥಪ್ರಸಾದ್ ಕೋಲ್ಚಾರು, ಜಗದೀಶ್ ಪರ್ಮಲೆ, ಕೃಷ್ಣ ಬೆಳ್ಚಪಾಡ, ಕಿಶನ್ ಕಲ್ಲಾಳ, ನವೀನ್ ಕೊಯನಾಡು, ಕುಸುಮಾಧಾರ ದೇವರಗುಂಡ, ಗ್ರಾಮಸ್ಥರು ಮತ್ತು ಕಳಗಿ ಅಭಿಮಾನಿ ಬಂಧುಗಳು, ಹಲವು ಸ್ತ್ರೀಶಕ್ತಿ ಒಕ್ಕೂಟದ ಕಾರ್ಯಕರ್ತೆಯರು ಮತ್ತಿತರರು ಉಪಸ್ಥಿತರಿದ್ದರು. ರಾಜ್ ಸಂಪಾಜೆ ನಿರೂಪಿಸಿ, ರಂಗಪ್ಪ ಅಂಬಟ್ಟೆಕಜೆ ಪ್ರಾರ್ಥಿಸಿ, ಸಂಪಾಜೆ ಗ್ರಾ.ಪಂ. ಅಧ್ಯಕ್ಷ ಕುಮಾರ್ ಚೆದ್ಕಾರ್ ಸ್ವಾಗತಿಸಿ, ಯಶೋಧರ ಬಿ.ಜೆ ವಂದಿಸಿದರು.

-ವರದಿ: ಶಭರೀಶ್ ಕುದ್ಕುಳಿ