ಮಡಿಕೇರಿ, ಸೆ. 30: ಭಾಗಮಂಡಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅತ್ಯುತ್ತಮ ಕಾರ್ಯನಿರ್ವಹಣೆ ಮತ್ತು ಸರ್ವಾಂಗೀಣ ಪ್ರಗತಿಯ ಕಾರಣಕ್ಕಾಗಿ ಅಪೆಕ್ಸ್ ಬ್ಯಾಂಕ್ 2017-18ನೇ ಸಾಲಿನ ರಾಜ್ಯ ಮಟ್ಟದ ತೃತೀಯ ಪ್ರಶಸ್ತಿಯನ್ನು ನೀಡಿದೆ ಎಂದು ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅಪೆಕ್ಸ್ ಬ್ಯಾಂಕ್ ಮಹಾಸಭೆಯಲ್ಲಿ ಪ್ರಶಸ್ತಿಯನ್ನು ಸಂಘದ ಪರವಾಗಿ ಸ್ವೀಕರಿಸಲಾಗಿದೆ. ಪ್ರಶಸ್ತಿಯು ರೂ. 10 ಸಾವಿರ ನಗದು, ಪ್ರಶಸ್ತಿ ಪತ್ರ, ಪಾರಿತೋಷಕವನ್ನು ಒಳಗೊಂಡಿದೆ. ಪ್ರಶಸ್ತಿ ಪಡೆದ ರಾಜ್ಯದ ಆರು ಸಂಘಗಳ ಪೈಕಿ ನಮ್ಮ ಸಂಘವೂ ಒಂದಾಗಿದೆ. ಅಲ್ಲದೆ, ಕೊಡಗು ಮಡಿಕೇರಿ, ಸೆ. 30: ಭಾಗಮಂಡಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅತ್ಯುತ್ತಮ ಕಾರ್ಯನಿರ್ವಹಣೆ ಮತ್ತು ಸರ್ವಾಂಗೀಣ ಪ್ರಗತಿಯ ಕಾರಣಕ್ಕಾಗಿ ಅಪೆಕ್ಸ್ ಬ್ಯಾಂಕ್ 2017-18ನೇ ಸಾಲಿನ ರಾಜ್ಯ ಮಟ್ಟದ ತೃತೀಯ ಪ್ರಶಸ್ತಿಯನ್ನು ನೀಡಿದೆ ಎಂದು ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್ ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅಪೆಕ್ಸ್ ಬ್ಯಾಂಕ್ ಮಹಾಸಭೆಯಲ್ಲಿ ಪ್ರಶಸ್ತಿಯನ್ನು ಸಂಘದ ಪರವಾಗಿ ಸ್ವೀಕರಿಸಲಾಗಿದೆ. ಪ್ರಶಸ್ತಿಯು ರೂ. 10 ಸಾವಿರ ನಗದು, ಪ್ರಶಸ್ತಿ ಪತ್ರ, ಪಾರಿತೋಷಕವನ್ನು ಒಳಗೊಂಡಿದೆ. ಪ್ರಶಸ್ತಿ ಪಡೆದ ರಾಜ್ಯದ ಆರು ಸಂಘಗಳ ಪೈಕಿ ನಮ್ಮ ಸಂಘವೂ ಒಂದಾಗಿದೆ. ಅಲ್ಲದೆ, ಕೊಡಗು 92 ನೇ ಸಾಲಿನಿಂದ ನಿರಂತರವಾಗಿ ಲಾಭವನ್ನು ಹೊಂದಿಕೊಂಡು ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದೆ. ಪ್ರಸಕ್ತ ಸಾಲಿನಲ್ಲಿ ಸಂಘವು 25.19 ಲಕ್ಷ ರೂ. ಲಾಭ ಗಳಿಸುವ ಮೂಲಕ ಲೆಕ್ಕಪರಿಶೋಧನಾ ವರ್ಗೀಕರಣದಲ್ಲಿ ಸತತ ‘ಎ’ ದರ್ಜೆಯನ್ನು ಹೊಂದಿರುವದಾಗಿ ಸತೀಶ್ ಕುಮಾರ್ ಮಾಹಿತಿ ನೀಡಿದರು.

ಸಂಘವು 3960 ಸದಸ್ಯರನ್ನು ಹೊಂದಿದ್ದು, 123 ಸ್ವ ಸಹಾಯ ಗುಂಪುಗಳು ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ, 4 ರೈತ ಸ್ನೇಹಿತರ ಕೂಟ ಹಾಗೂ 2 ಜಂಟಿ ಬಾಧ್ಯತಾ ಗುಂಪುಗಳನ್ನು ಹೊಂದಿದೆ. ಸಂಘದ ವಿವಿಧ ಬಗೆಯ ಠೇವಣಾತಿಗಳಲ್ಲಿ ರೂ. 10.56 ಕೋಟಿ ಸಂಗ್ರಹಿಸಿ, ಸದಸ್ಯರುಗಳಿಗೆ ರೂ. 12.94 ಕೋಟಿ ವಿವಿಧ ಬಗೆಯ ಸಾಲಗಳನ್ನು ವಿತರಿಸಿರುವದಾಗಿ ಸತೀಶ್ ಕುಮಾರ್ ತಿಳಿಸಿದರು.

ಸಂಘದ ವತಿಯಿಂದ ರೈತರ ಅನುಕೂಲಕ್ಕಾಗಿ ನಬಾರ್ಡ್ ಸಹಯೋಗದಲ್ಲಿ ರೂ. 45 ಲಕ್ಷ ವೆಚ್ಚದ ನೂತನ ಮಾರುಕಟ್ಟೆಯ ಮಾರಾಟ ಮಳಿಗೆಗಳನ್ನು ನಿರ್ಮಿಸಿದ್ದು, ಇದನ್ನು ಮುಂದಿನ ಅಕ್ಟೋಬರ್ ಅಂತ್ಯದೊಳಗೆ ಉದ್ಘಾಟಿಸಲು ಉದ್ದೇಶಿಸಲಾಗಿದೆ. ಸಂಘ ತನ್ನ 30 ಸೆಂಟ್ ಜಾಗದಲ್ಲಿ 70 ಲಕ್ಷ ಮೌಲ್ಯದ ಸುಸಜ್ಜಿತ ಸ್ವಂತ ಕಟ್ಟಡವನ್ನು ಹೊಂದಿರುವದಾಗಿ ಹೇಳಿದರು.

ಸಂಘವು ನಬಾರ್ಡ್ ಹಾಗೂ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ ರೂ. 99 ಲಕ್ಷ ಗಳನ್ನು ಕಟ್ಟಡ ಮತ್ತು ವ್ಯಾಪಾರ ಅಭಿವೃದ್ಧಿಗಾಗಿ ಹೊಂದಿದ್ದ ಸಾಲವನ್ನು ಸಂಪೂರ್ಣವಾಗಿ ಮರುಪಾವತಿ ಮಾಡುವ ಮೂಲಕ, ಸ್ವಂತ ಬಂಡವಾಳದ ಮೇಲೆ ನಿಂತಿರುವದಾಗಿ ಮಾಹಿತಿ ನೀಡಿದರು.

389 ಮಂದಿಗೆ ಸಾಲ ಮನ್ನಾ ಸೌಲಭ್ಯ: ಸರ್ಕಾರದ ಸಾಲ ಮನ್ನಾ ಸೌಲಭ್ಯ ಸಂಘದ 453 ರೈತ ಸದಸ್ಯರ ಪೈಕಿ 389 ಮಂದಿಗೆ ಲಭ್ಯವಾಗಿದ್ದು, ಇವರುಗಳ ರೂ. 2.96 ಕೋಟಿ ಸಾಲ ಮನ್ನಾವಾಗಿದೆ. ಉಳಿದ ಸದಸ್ಯರುಗಳ ಸಾಲಮನ್ನಾಕ್ಕೆ ಪ್ರಯತ್ನ ನಡೆದಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘÀದ ಉಪಾಧ್ಯಕ್ಷರಾದ ಬಾರಿಕೆ ಪುಷ್ಪ, ನಿರ್ದೇಶಕರುಗಳಾದ ಜೆ.ಎಸ್.ನಂಜುಂಡಪ್ಪ, ಅಯ್ಯಣಿರ ಎ.ದಿನೇಶ್, ಕುದುಪಜೆ ಹರೀಶ್ ಹಾಗೂ ಕಾರ್ಯನಿರ್ವಹಣಾಧಿಕಾರಿ ಕಲಾವತಿ ಉಪಸ್ಥಿತರಿದ್ದರು.