ಮಡಿಕೇರಿ, ಅ.1: ಮಡಿಕೇರಿ ದಸರಾ ಜನೋತ್ಸವಕ್ಕೆ ಈ ಬಾರಿಯಿಂದ ಜಾನಪದ ಸಂಭ್ರಮವೂ ಸೇರ್ಪಡೆಯಾಗಿದ್ದು, ತಾ. 3 ರಂದು (ನಾಳೆ)ಮಡಿಕೇರಿಯಲ್ಲಿ ಕೊಡಗು ಜಾನಪದ ಉತ್ಸವ ಆಯೋಜಿತವಾಗಿದ್ದು, ರಾಜ್ಯದ ವಿವಿಧ ಜಾನಪದ ಕಲಾತಂಡಗಳನ್ನೊಳಗೊಂಡು ಜಾನಪದ ವೈಭವ ಮೂಡಿ ಬರಲಿದೆ.
ಕೊಡಗು ಜಾನಪದ ಉತ್ಸವವು ಮಡಿಕೇರಿಯ ಗಾಂಧಿ ಮೈದಾನದಲ್ಲಿ ಮಡಿಕೇರಿ ನಗರ ದಸರಾ ಸಮಿತಿ ಸಹಯೋಗದಲ್ಲಿ ಜರುಗಲಿದೆ. ಬೆಳಗ್ಗೆ 9.30 ಗಂಟೆಗೆ ಮಂಗಳೂರು ರಸ್ತೆಯಿಂದ ಗಾಂಧಿ ಮೈದಾನದವರೆಗೆ ವೈವಿಧ್ಯಮಯ ಜಾನಪದ ಕಲಾ ಜಾಥಾ ನಡೆಯಲಿದೆ.
ಜಾನಪದ ಪರಿಕರಗಳ ಪ್ರದರ್ಶನವನ್ನು ಗಾಂಧಿ ಮೈದಾನದಲ್ಲಿ ಏರ್ಪಡಿಸಲಾಗಿದೆ.
ಪಾಲ್ಗೊಳ್ಳುವ ಕಲಾತಂಡಗಳು
ರಾಮನಗರದ ಚಿಕ್ಕನರಸಯ್ಯ ತಂಡದಿಂದ ಪಟಕುಣಿತ, ಪಾಂಡವ ಪುರದ ಶಿವಮಾದು ತಂಡದಿಂದ ಪೂಜಾ ಕುಣಿತ, ಕೃಷ್ಣೇಗೌಡ ಮತ್ತು ತಂಡದಿಂದ ಚಿಲಿಪಿಲಿ ಗೊಂಬೆ, ರಾಮನಗರದ ಪಾರ್ಥಸಾರಥಿ ತಂಡ ದಿಂದ ಡೊಳ್ಳು ಕುಣಿತ, ಮದ್ದೂರಿನ ಸಂತೋಷ್ ಮತ್ತು ತಂಡದಿಂದ ವೀರಗಾಸೆ, ಉತ್ತರ ಕರ್ನಾಟಕದ ಗೊಂದಳಿ ಅಂಬಾಜಿ ಸುಗತೇಕರ ತಂಡದಿಂದ ಗೊಂದಳಿ ಹಾಡು, ಮಡಿಕೇರಿಯ ನಾಟ್ಯ ಗಣಪತಿ ತಂಡದಿಂದ ಸುಗ್ಗಿಕುಣಿತ, ಸ್ಫೂರ್ತಿ ಮಹಿಳಾ ತಂಡದಿಂದ ಜಾನಪದ ಹಾಡು, ಸೋಮವಾರಪೇಟೆಯ ಕಾವೇರಿ ಕಲಾತಂಡದಿಂದ ಜನಪದ ನೃತ್ಯ, ಮೆಹಕ್ ಫಾತಿಮಾ ಜಾನಪದ ಗೀತೆ, ಹಿರಿಯ ಕಲಾವಿದೆ ರಾಣಿಮಾಚಯ್ಯ ತಂಡದಿಂದ ಉಮ್ಮತ್ತಾಟ್, ವೀರಾಜಪೇಟೆಯ ವಿಲಿನಾ ಮತ್ತು ತಂಡದಿಂದ ಕ್ರೈಸ್ತ ಧರ್ಮದ ಜಾನಪದ ನೃತ್ಯ, ರಾಜ್ಯ ಪ್ರಶಸ್ತಿ ವಿಜೇತ ಬಾಳೆಲೆಯ ಜೇನುಕುರುಬರ ಮರಿ ಮತ್ತು ದಾಸಿ ತಂಡದಿಂದ ಸೋರೆಬುರುಡೆ ನೃತ್ಯ, ತೋರ ಗ್ರಾಮದ ಶಾರದಾ ಮತ್ತು ತಂಡದಿಂದ ಉರ್ಟಿ ಕೊಟ್ಟ್ ನೃತ್ಯ, ಬಿ.ಆರ್. ಸತೀಶ್, ಟಿ.ಡಿ. ಮೋಹನ್ ತಂಡದಿಂದ ಜಾನಪದ ಕಲಾಕುಂಚ ಗಾನ, ಸಂಪಾಜೆಯ ಚಡಾವುನ ನೇತಾಜಿ ಗೆಳೆಯರ ಬಳಗದಿಂದ ಕಂಗೀಲು ನೃತ್ಯ, ಪುತ್ತೂರಿನ ಕೊಂಬೆಟ್ನ ಮರಾಠೆ ಯುವವೇದಿಕೆ ಯಿಂದ ಕಂಸಾಳೆ ನೃತ್ಯ, ಶಾಂತಳ್ಳಿಯ ಬಿ.ಎ. ಗಣೇಶ್ ಅವರಿಂದ ಜಾನಪದ ಹಾಡು, ಸೋಮವಾರಪೇಟೆಯ ಪ್ರಗತಿ ಪರ ಮಹಿಳಾ ವೇದಿಕೆಯಿಂದ ವಾಲಗ ನೃತ್ಯ, ಕಡಗದಾಳು ಸರ್ಕಾರಿ ಶಾಲಾ ಮಕ್ಕಳಿಂದ ಕೊಡವ ಜಾನಪದ ನೃತ್ಯ, ಮಡಿಕೇರಿಯ ಹ್ಯಾರೀಸ್ ಮತ್ತು ತಂಡದಿಂದ ದಫ್ ನೃತ್ಯ, ಭಾಗಮಂಡಲದ ಮಿಲನ ಮತ್ತು ತಂಡದಿಂದ ಜಾನಪದ ವೈಭವ, ಮಡಿಕೇರಿಯ ಸೋನು ಪ್ರೀತಾ ತಂಡದಿಂದ ಜಾನಪದ ಗೀತಾ ಗಾಯನ, ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲಾ ಮಕ್ಕಳಿಂದ ಸುಗ್ಗಿ ನೃತ್ಯ, ಭಾಗಮಂಡಲದ ಜ್ಞಾನೋದಯ ಶಾಲಾ ತಂಡದಿಂದ ಸೋಲಿಗರ ನೃತ್ಯ, ಮಾಲ್ದಾರೆಯ ಮುತ್ತಪ್ಪ ತಂಡದಿಂದ ಚಂಡೆವಾದ್ಯ, ಸೇರಿದಂತೆ ಮತ್ತಷ್ಟು ತಂಡಗಳಿಂದ ಅ. 3 ರಂದು ಮಧ್ಯಾಹ್ನ 12.30 ರಿಂದ ಸುಮಾರು 4 ಗಂಟೆಗಳ ಜಾನಪದ ವೈಭವ ಪ್ರದರ್ಶಿತಗೊಳ್ಳಲಿದೆ.