ಸುಂಟಿಕೊಪ್ಪ, ಸೆ. 30: ಸುಂಟಿಕೊಪ್ಪ ಮಲೆಯಾಳಿ ಸಮಾಜದ ವತಿಯಿಂದ 12ನೇ ವರ್ಷದ ಓಣಂ ಆಚರಣೆಯನ್ನು ಅ.2. ರಂದು ಪೂರ್ವಾಹ್ನ 11.30 ಗಂಟೆಗೆ ಶ್ರೀ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ.
ಇಲ್ಲಿನ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿತಗೊಂಡಿರುವ ಸಮಾರಂಭದ ಉದ್ಘಾಟನೆÉಯನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ನೆರವೇರಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಮಲೆಯಾಳಿ ಸಂಘದ ಅಧ್ಯಕ್ಷ ವಿ.ಎ.ಸಂತೋಷ್ ವಹಿಸಲಿರುವರು ಮುಖ್ಯ ಅತಿಥಿಗಳಾಗಿ ಹಾಸನ ಜಿಲ್ಲಾ ಗ್ರಾಹಕರ ಆಯೋಗ ಅಧ್ಯಕ್ಷ ಎ.ಲೋಕೇಶ್‍ಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್ ಉಪಸ್ಥಿತರಿರುವರು.
ಮಲೆಯಾಳಿ ಸಮಾಜ ಅಧ್ಯಕ್ಷ ಕೆ.ಎಸ್. ರಮೇಶ, ಸೋಮವಾರಪೇಟೆ ಮಲೆಯಾಳಿ ಸಮಾಜ ಅಧ್ಯಕ್ಷ ವಿ.ಎಂ.ವಿಜಯನ್, ಚೆಟ್ಟಳ್ಳಿ ಮಲೆಯಾಳಿ ಸಮಾಜದ ಕಾರ್ಯದರ್ಶಿ ಶಶಿಕುಮಾರ್, ಸುಂಟಿಕೊಪ್ಪ ರಾಮ ಸೇವಾ ಸಮಿತಿ ಕಾರ್ಯದರ್ಶಿ ಸುದರ್ಶನ್ ನಾಯ್ಡು, ಸುಂಟಿಕೊಪ್ಪ ಕೆನರಾ ಬ್ಯಾಂಕ್ ವ್ಯವಸ್ಥಾಪಕರಾದ ಜಿ.ಜಿ.ಅನೂಷ್, ಸುಂಟಿಕೊಪ್ಪ ಮಲೆಯಾಳಿ ಸಮಾಜ ಸ್ಥಾಪಕ ಆಧ್ಯಕ್ಷ ಪಿ.ಆರ್.ಸುಕುಮಾರ್, ಮಾಜಿ ಅಧ್ಯಕ್ಷ ಪಿ.ಸಿ.ಮೋಹನ್, ಸೋಮವಾರಪೇಟೆ ತಾಲೂಕು ಮಲೆಯಾಳಿ ಸಮಾಜ ನಿರ್ದೆಶಕ ಆರ್.ರಮೇಶಪಿಳೈ, ಸುಂಟಿಕೊಪ್ಪ ಮಲೆಯಾಳಿ ಸಮಾಜದ ಗೌರವ ಅಧ್ಯಕ್ಷ ಎಂ.ಸಿ.ಬಾಸ್ಕರನ್, ಮಾಜಿ ಉಪಾಧ್ಯಕ್ಷ ಕೆ.ಪ್ರಕಾಶನ್ ಹಾಗೂ ವಿ.ಕೆ.ಗಂಗಾಧರ್ ಆಗಮಿಸಲಿದ್ದಾರೆ ಎಂದು ಮಲೆಯಾಳಿ ಸಮಾಜದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.