ಮಡಿಕೇರಿ, ಸೆ. 30: ಮಡಿಕೇರಿ ಉಪವಿಭಾಗದ ನೂತನ ಪೊಲೀಸ್ ಉಪ ಅಧೀಕ್ಷಕರಾಗಿ ಬಿ.ಪಿ. ದಿನೇಶ್ ಕುಮಾರ್ ಅವರು ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ಇವರು ಮೂಲತಃ ಕೊಡಗಿನವರೇ ಆಗಿದ್ದು, ಈ ಮೊದಲು ರಾಜ್ಯದ ವಿವಿಧೆಡೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ.