ಸುಂಟಿಕೊಪ್ಪ, ಅ. 1: ಶ್ರೀರಾಮ ಮತ್ತು ಶ್ರೀ ಚಾಮುಂಡೇಶ್ವರಿ ದೇವಸ್ಥಾನ ವತಿಯಿಂದ 64ನೇ ವರ್ಷದ ನವರಾತ್ರಿ ಉತ್ಸವಕ್ಕೆ ಗಣ ಹೋಮದೊಂದಿಗೆ ಚಾಲನೆ ನೀಡಲಾಯಿತು.
ಕಂಬಿಬಾಣೆಯ ಶ್ರೀರಾಮ ಮತ್ತು ಶ್ರೀ ಚಾಮುಂಡೇಶ್ವರಿ ದೇವಸ್ಥಾನ ವತಿಯಿಂದ ನವರಾತ್ರಿ ಅಂಗವಾಗಿ ದೇವಸ್ಥಾನವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ಆರಂಭಿಕ ದಿನವಾದ ಭಾನುವಾರ ದೇವಸ್ಥಾನದಲ್ಲಿ ಬೆಳಿಗ್ಗೆ ಗಣಹೋಮ ನಡೆಸಿ ಶೈ¯ಪುತ್ರಿ ಪೂಜೆಯನ್ನು ನಡೆಸಲಾಯಿತು.
ತಾ. 8 ರವರೆಗೆ ನವರಾತ್ರಿ ಉತ್ಸವ ಜರುಗಲಿದ್ದು, ತಾ. 4 ರಂದು ದುರ್ಗಾಪೂಜೆ, ತಾ. 6 ರಂದು ಝೇಂಕಾರ ವಾದ್ಯಗೋಷ್ಠಿ ತಂಡದ ವತಿಯಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ತಾ. 7 ರಂದು ಸಂಜೆ 6 ಗಂಟೆಯಿಂದ ವಾಹನ ಪೂಜೆ, ತಾ. 8 ರಂದು ರಾತ್ರಿ 7 ಗಂಟೆಯಿಂದ ಶೋಭಾಯಾತ್ರೆ ನಡೆಯಲಿದೆ. ಈ ಸಂದರ್ಭದಲ್ಲಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಶಶಿಕಾಂತರೈ, ಕಾರ್ಯದರ್ಶಿ ಜವಾಹರ್, ಖಜಾಂಜಿ ಆನಂದ, ಮಂಜುನಾಥ್, ಜಯಂತ್ ಕುಮಾರ್, ರವಿ, ಸಿದ್ಧಪ್ಪ ಹಾಗೂ ದಿನೇಶ್ ಮತ್ತಿತರರು ಇದ್ದರು