ಒಡೆಯನಪುರ, ಅ. 1: ಸಮಿಪದ ಗೋಪಾಲಪುರ ಶ್ರೀ ಬಸವೇಶ್ವರ ವಿವಿದೋದ್ದೇಶ ಸಹಕಾರ ದವಸ ಭಂಡಾರದ 2018-19ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಜಿ.ಪಿ.ಪುಟ್ಟಪ್ಪ ಅಧ್ಯಕ್ಷತೆಯಲ್ಲಿ ಅಂಗನವಾಡಿ ಕೇಂದ್ರ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷ ಪುಟ್ಟಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದ ಜನರನ್ನು ಒಟ್ಟಗೂಡಿಸಿ ಶ್ರಮದಿಂದ ಸಂಘವನ್ನು ಮುನ್ನಡೆಸಿಕೊಂಡು ಬರಲಾಗುತ್ತಿದೆ ಎಂದರು. ಸಂಘವು 9 ಗ್ರಾಮ ವ್ಯಾಪ್ತಿಯನ್ನು ಒಳಗೊಂಡಿದ್ದು, ಪ್ರಸ್ತುತ ಸಾಲಿನಲ್ಲಿ ಲಾಭಾಂಶದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಸಂಘದ ಕಾರ್ಯಚಟುವಟಿಕೆಗಳನ್ನು ಗಮನಿಸಿ ಕೆಡಿಸಿಸಿ ಬ್ಯಾಂಕ್ ವತಿಯಿಂದ ಪ್ರಶಸ್ತಿ ಲಭಿಸಿರುವದು ಶ್ಲಾಘನೀವಾಗಿದೆ ಎಂದರು.

ಸಂಘದ ಬೆಳವಣಿಗೆಯಲ್ಲಿ ಆಡಳಿತ ಮಂಡಳಿ ಹಾಗೂ ಸರ್ವ ಸದಸ್ಯರುಗಳ ಪಾತ್ರ ಮುಖ್ಯವಾಗಿರುತ್ತದೆ. ಸಂಘದ ಸದಸ್ಯರು ಪಡೆದುಕೊಂಡ ಸಾಲವನ್ನು ಸಕಾಲದಲ್ಲಿ ಮರುಪಾವತಿಕೊಂಡರೆ ಇತರ ಸದಸ್ಯರಿಗೆ ಸಾಲವನ್ನು ನೀಡಬಹುದು. ಇದರಿಂದ ಸಂಘದ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಎಂದರು. ಸಂಘದ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸಲು ಸ್ವಂತ ಕಟ್ಟಡದ ಅವಶ್ಯಕತೆ ಇರುವ ನಿಟ್ಟಿನಲ್ಲಿ ಸಂಬಂಧಪಟ್ಟ ಜನಪ್ರತಿನಿಧಿಗಳ ಗಮನಕ್ಕೆ ತರಲಾಗುವದೆಂದರು.

ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ಜಿ.ಬಿ. ಪರಮೇಶ್, ನಿರ್ದೇಶಕರುಗಳಾದ ಎಂ.ಜೆ. ನಾಗರಾಜ್, ಜಿ.ಬಿ. ಅಣ್ಣಪ್ಪ, ಮೋಹನ್, ಜಿ.ಆರ್. ಧರ್ಮಪಾಲ್, ಉಮೇಶ್, ಜಿ.ಎಂ. ಸುಜಾತ ಸಂಘದ ಕಾರ್ಯದರ್ಶಿ ಜಿ.ಬಿ. ಸಂದೀಪ್ ಮುಂತಾದವರು ಹಾಜರಿದ್ದರು.