ಸಿದ್ದಾಪುರ, ಸೆ.30: ಗುಹ್ಯ ಅಗಸ್ತ್ಯೇಶ್ವರ ಸಹಕಾರ ಸಂಘವು ರೂ. 90 ಲಕ್ಷ ನಿವ್ವಳ ಲಾಭವನ್ನು ಗಳಿಸಿದ್ದು, ಸದಸ್ಯರಿಗೆ ಶೇ.25ರಷ್ಟು ಡಿವಿಡೆಂಡ್ ನೀಡಲಾಗುವದು ಎಂದು ಸಂಘದ ಅಧ್ಯಕ್ಷ ಎಂ.ಎಸ್. ವೆಂಕಟೇಶ್ ತಿಳಿಸಿದ್ದಾರೆ.
ತಾ 28 ರಂದು ಪ್ರಕಟವಾದ ಸುದ್ದಿಯಲ್ಲಿ ಗುಹ್ಯ ಅಗಸ್ತ್ಯೇಶ್ವರ ಸಹಕಾರ ಸಂಘವು ರೂ. 9 ಲಕ್ಷ ಲಾಭದಲ್ಲಿದೆ ಎಂದು ಪ್ರಕಟವಾಗಿದ್ದು, ಸಂಘವು ರೂ. 90.28 ಲಕ್ಷ ಲಾಭದಲ್ಲಿದೆ ಎಂದಾಗಬೇಕಿದೆ.