ಮಡಿಕೇರಿ, ಸೆ. 30: ಗ್ರೀನ್ಸ್ ಯುವಕ ಸಂಘ ಕಟ್ಟೆಮಾಡು ಇವರ ವತಿಯಿಂದ ತಾ. 2 ರಂದು ಗಾಂಧಿಜಯಂತಿಯ ಅಂಗವಾಗಿ ಹಗ್ಗಜಗ್ಗಾಟ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. ಜಿಲ್ಲೆಯಲ್ಲಿ ಉಂಟಾದ ಮಹಾಮಳೆ ಮತ್ತು ಪ್ರಕೃತಿಯ ವಿಕೋಪದಿಂದ ಜಿಲ್ಲೆಯ ಜನತೆ ಹಾಗೂ ಗ್ರಾಮದ ನಿವಾಸಿಗಳು ತೊಂದರೆಗೆ ಒಳಗಾದ ಕಾರಣದಿಂದ ಸಂಭ್ರಮ ಪಡುವಂತ ಕಾರ್ಯಕ್ರಮವನ್ನು ರದ್ದುಮಾಡಲಾಗಿದೆ ಎಂದು ಗ್ರೀನ್ಸ್ ಯುವಕ ಸಂಘದ ಪ್ರಕಟಣೆ ತಿಳಿಸಿದೆ.