ಮಡಿಕೇರಿ, ಸೆ. 30: ನಗರದ ನಾಲ್ಕು ಶಕ್ತಿ ದೇವತೆಗಳಲ್ಲಿ ಹಿರಿಯ ಅಕ್ಕಳೆಂದೆ ಖ್ಯಾತಿ ಪಡೆದಿರುವ ಕುಂದುರುಮೊಟ್ಟೆ ಶ್ರೀ ಚೌಟಿಮಾರಿಯಮ್ಮ ದೇವಾಲಯ ದಸರ ಸಮಿತಿಯು ಈ ಬಾರಿ 46ನೇ ವರ್ಷದ ದಸರಾ ಉತ್ಸವಕ್ಕೆ ಸಜ್ಜಾಗುತ್ತಿದ್ದು, ಈ ಬಾರಿಯ ಮಂಟಪದಲ್ಲಿ ಸುಬ್ರಹ್ಮಣ್ಯನಿಂದ ‘ತಾರಕಾಸುರನ ವಧೆ’ ಎಂಬ ಕಥಾ ಸಾರಾಂಶವನ್ನು ಅಳವಡಿಸಲಾಗುತ್ತಿದೆ ಎಂದು ಕುಂದುರುಮೊಟ್ಟೆ ಶ್ರೀ ಚೌಟಿಮಾರಿಯಮ್ಮ ದೇವಾಲಯ ದಸರಾ ಮಂಟಪ ಸಮಿತಿ ಅಧ್ಯಕ್ಷ ವಿ.ಆರ್. ಮನು ಮಂಜುನಾಥ್ ತಿಳಿಸಿದ್ದಾರೆ.

ಮಂಟಪಕ್ಕೆ ಎರಡು ಟ್ರ್ಯಾಕ್ಟರ್‍ಗಳನ್ನು ಬಳಸಲಾಗುತ್ತ್ತಿದ್ದು, ದಿಂಡಿಗಲ್‍ನ ನ್ಯೂಮಾತಾ ಎಲೆಕ್ಟ್ರ್ರಿಕಲ್‍ನವರು ಲೈಟಿಂಗ್ ಬೋರ್ಡ್ ಅಳವಡಿಸಲಿದ್ದಾರೆ. ಧ್ವನಿವರ್ಧಕವನ್ನು ಬೆಂಗಳೂರಿನ ಈವೆಂಟ್ ಟೆಕ್ ಹಾಗೂ ಸ್ಟುಡಿಯೋ ಸೆಟ್ಟಿಂಗ್ಸ್ ಅನ್ನು ಮಡಿಕೇರಿಯ ಸತ್ಯಪ್ರೊ ಸೌಂಡ್‍ನ ಅವಿನ್ ಕುಮಾರ್ ಹಾಗೂ ಬೆಂಗಳೂರಿನ ಇವೆಂಟ್ ಟೆಕ್ ಸಂಸ್ಥೆ ಮಾಡಲಿದೆ. ಮಂಟಪದಲ್ಲಿ ಒಟ್ಟು 22 ಕಲಾಕೃತಿಗಳನ್ನು ಬಳಸಲಾಗುತಿದ್ದು, ಕಲಾಕೃತಿಗಳನ್ನು ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್ ಮತ್ತು ಸಮಿತಿಯ ಸದಸ್ಯರಾದ ಅರುಣ ಅವರು ರಚಿಸಿದ್ದಾರೆ. ಫ್ಲಾಟ್ ಫಾರಂನ್ನು ಸಮಿತಿಯ ಸದಸ್ಯ ಪದ್ಮನಾಭ ಮತ್ತು ತಂಡ ನಿರ್ಮಾಣ ಮಾಡಲಿದೆ. ಟ್ರ್ಯಾಕ್ಟರ್ ಸೆಟ್ಟ್ಟಿಂಗ್ಸ್‍ನ್ನು ಕಲಾಸಾಗರದ ಎಂ.ವಿ. ಮಂಜುನಾಥ್ ಮತ್ತು ತಂಡ ಮಾಡಲಿದೆ. ಕಲಾಕೃತಿಗಳ ಅಲಂಕಾರವನ್ನು ಖಾದರ್ ನಿರ್ದೇಶನದಲ್ಲಿ ಸಮಿತಿಯ ಸದಸ್ಯರಾದ ಶಿವರಾಂ, ಪದ್ದು ಹಾಗೂ ಚುಮ್ಮ ಮಾಡಲಿದ್ದಾರೆ. ಕಲಾಕೃತಿಗಳಿಗೆ ಚಲನ ವಲನವನ್ನು ದೀಕ್ಷಾ ಫ್ಯಾಭ್ರಿಕೇಶನ್ ತಂಡ ನೀಡಲಿದೆ. ಬೆಂಗಳೂರಿನ ಆರ್.ಜೆ.ಫೈರ್ ಟೆಕ್ ಸಂಸ್ಥೆ ಆಕರ್ಷಕ ಫೈರ್ ಎಫೆಕ್ಟ್ ನೀಡಲಿದೆ ಎಂದು ಮನು ಮಂಜುನಾಥ್ ವಿವರಿಸಿದರು.

ಒಟ್ಟು 16 ಲಕ್ಷ ವೆಚ್ಚದಲ್ಲಿ ಮಂಟಪವನ್ನು ಹೊರತರಲಾಗುತಿದ್ದು, ನಾಸಿಕ್ ಬ್ಯಾಂಡ್ ಮಂಟಪವನ್ನು ಮುನ್ನಡೆಸಲಿದೆ. ಜನ ಮೆಚ್ಚುಗೆ ಪಡೆಯುವದರೊಂದಿಗೆ ಬಹುಮಾನಕ್ಕಾಗಿ ಪೈಪೋಟಿ ನೀಡಲಾಗುವದು. ಇದಕ್ಕಾಗಿ 300 ಸದಸ್ಯರ ತಂಡ ಶ್ರಮಿಸುತ್ತಿದೆ ಎಂದು ಮನು ಮಂಜುನಾಥ್ ಮಾಹಿತಿ ನೀಡಿದ್ದಾರೆ.

- ಉಜ್ವಲ್ ರಂಜಿತ್