ಸೋಮವಾರಪೇಟೆ, ಅ. 1: ಇಲ್ಲಿನ ವೀರಶೈವ ಸಮಾಜ, ಅಕ್ಕನ ಬಳಗ ಹಾಗೂ ಬಸವೇಶ್ವರ ಯುವಕ ಸಂಘದ ಆಶ್ರಯದಲ್ಲಿ, ಬಸವೇಶ್ವರ ದೇವಾಲಯದಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಪಟ್ಟಣದ ಆನೆಕೆರೆಯಲ್ಲಿ ಗಂಗೆ ಪೂಜೆಯೊಂದಿಗೆ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಮೆರವಣಿಗೆಯಲ್ಲಿ ದೇವಾಲಯಕ್ಕೆ ತಂದು ಪ್ರತಿಷ್ಠಾಪಿಸಲಾಯಿತು. ದೇವಾಲಯದ ಅರ್ಚಕ ಮಿಥುನ್ ಶಾಸ್ತ್ರಿಯವರ ಪೌರೋಹಿತ್ಯದಲ್ಲಿ ದೇವಿಗೆ ಅಲಂಕಾರ, ಅಷ್ಟೋತ್ತರ, ಅರ್ಚನೆ ಸೇರಿದಂತೆ ವಿಶೇಷ ಪೂಜೆ ನಡೆಯಿತು. ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗ ನೆರವೇರಿತು.