ಸುಂಟಿಕೊಪ್ಪ, ಅ. 1: ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2018-19 ಸಾಲಿನಲ್ಲಿ 33.02 ಲಕ್ಷ ಲಾಭಗಳಿಸಿದೆ. ಸದಸ್ಯರುಗಳಿಗೆ ಶೇ. 15 ರಷ್ಟು ಡಿವಿಡೆಂಡ್ ನೀಡಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಬಿ.ಎ. ಮೊಣ್ಣಪ್ಪ ಹೇಳಿದರು.
ಮಾದಾಪುರ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ 2018-19ನೇ ಸಾಲಿನ ವಾರ್ಷಿಕ ಮಹಾ ಸಭೆಯು ಸಂಘದ ಸಭಾಂಗಣದಲ್ಲಿ ಅಧ್ಯಕ್ಷ ಮೊಣ್ಣಪ ಅಧ್ಯಕ್ಷತೆಯಲ್ಲಿ ನಡೆಯಿತು.
ಸದಸ್ಯರುಗಳ ಸಲಹೆ ಸಹಕಾರದಿಂದ ಹಾಗೂ ಸಂಘದ ಮಳಿಗೆಯಲ್ಲಿನ ಗೊಬ್ಬರ ಹತ್ಯಾರಗಳ ಮಾರಾಟದಿಂದ ಖರೀದಿಸುವದರಿಂದ ಸಂಘ ಲಾಭದತ್ತ ಮುನ್ನಡೆಯಲು ಸಹಕಾರಿಯಾಗಿದೆ ಎಂದು ಅಧ್ಯಕ್ಷರು ಸೂಚ್ಯವಾಗಿ ಹೇಳಿದರು.
ಸಂಘದಲ್ಲಿ ಪ್ರಸ್ತುತ 1247 ಸದಸ್ಯರುಗಳಿದ್ದು, ಶೇರು ಬಂಡವಾಳ 86.99 ಲಕ್ಷವಿದೆ. ಸಂಘದಲ್ಲಿ 680.42 ರೂ ಠೇವಣಿ ಇದೆ. ಕೃಷಿ ಸೇರಿದಂತೆ ಎಲ್ಲಾ ರೀತಿಯ 940.78 ಸಾಲವನ್ನು ನೀಡಲಾಗಿದೆ ಎಂದು ಅವರು ವಿವರಿಸಿದರು.
ತಾರತಮ್ಯ ಖಂಡನೆ: ಮಾದಾಪುರ ಕೃಷಿಪತ್ತಿನ ಸಹಕಾರ ಸಂಘದ ಸದಸ್ಯರುಗಳು 2018ನೇ ಸಾಲಿನ ಮಹಾಪ್ರಳಯದಿಂದ ಮನೆ ಮಠ ತೋಟ ಕಳೆದುಕೊಂಡಿದ್ದಾರೆ. ಆದರೆ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಹಿಂದಿನ ಆಡಳಿತ ಮಂಡಳಿ ಅಧ್ಯಕ್ಷರು ನಮ್ಮ ಸಂಘದ ಸದಸ್ಯರುಗಳಿಗೆ ಪರಿಹಾರವನ್ನು ಕನಿಷ್ಟ ಪ್ರಮಾಣದಲ್ಲಿ ನೀಡಿದ್ದಾರೆ. ಇದು ಖಂಡನೀಯ; ಬೇರೆ ಸಹಕಾರ ಸಂಘಕ್ಕೆ ಅಧಿಕ ಪರಿಹಾರ ಸೂಚ್ಯವಾಗಿ ಹೇಳಿದರು.
ಸಂಘದಲ್ಲಿ ಪ್ರಸ್ತುತ 1247 ಸದಸ್ಯರುಗಳಿದ್ದು, ಶೇರು ಬಂಡವಾಳ 86.99 ಲಕ್ಷವಿದೆ. ಸಂಘದಲ್ಲಿ 680.42 ರೂ ಠೇವಣಿ ಇದೆ. ಕೃಷಿ ಸೇರಿದಂತೆ ಎಲ್ಲಾ ರೀತಿಯ 940.78 ಸಾಲವನ್ನು ನೀಡಲಾಗಿದೆ ಎಂದು ಅವರು ವಿವರಿಸಿದರು.
ತಾರತಮ್ಯ ಖಂಡನೆ: ಮಾದಾಪುರ ಕೃಷಿಪತ್ತಿನ ಸಹಕಾರ ಸಂಘದ ಸದಸ್ಯರುಗಳು 2018ನೇ ಸಾಲಿನ ಮಹಾಪ್ರಳಯದಿಂದ ಮನೆ ಮಠ ತೋಟ ಕಳೆದುಕೊಂಡಿದ್ದಾರೆ. ಆದರೆ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಹಿಂದಿನ ಆಡಳಿತ ಮಂಡಳಿ ಅಧ್ಯಕ್ಷರು ನಮ್ಮ ಸಂಘದ ಸದಸ್ಯರುಗಳಿಗೆ ಪರಿಹಾರವನ್ನು ಕನಿಷ್ಟ ಪ್ರಮಾಣದಲ್ಲಿ ನೀಡಿದ್ದಾರೆ. ಇದು ಖಂಡನೀಯ; ಬೇರೆ ಸಹಕಾರ ಸಂಘಕ್ಕೆ ಅಧಿಕ ಪರಿಹಾರ