ಮಡಿಕೇರಿ, ಅ. 1: ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ಮುಖವಾಡವನ್ನು ಬಯಲಿಗೆಳೆಯುವಂತೆ ಹಾಗೂ ಸ್ಥಳೀಯ ಬೇಡಿಕೆಗಳು ಮತ್ತು ರಾಜ್ಯಾದ್ಯಂತ ಇರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ರಾಜ್ಯ ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಗಿದೆ.
ದಸಂಸದ ಜಿಲ್ಲಾ ಸಂಚಾಲಕ ಎಂ. ಎಸ್. ವೀರೇಂದ್ರ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಈ ಸಂದರ್ಭ ದಸಂಸ ಜಿಲ್ಲಾ ಸಂಘಟನಾ ಸಂಚಾಲಕರಾದ ಡಿ.ಎಸ್.ಕಾಂತರಾಜ್, ಖಜಾಂಚಿ ಬಿ.ಎಸ್. ದಿನೇಶ್, ಎಂ.ಕೆ. ಮಂಜುನಾಥ್, ಮಹಿಳಾ ಒಕ್ಕೂಟದ ಪ್ರಮುಖರಾದ ಮಂಜುಳ, ಪ್ರಮೀಳಾ, ತಾಲೂಕು ಸಂಚಾಲಕರಾದ ಬಿ.ಎಸ್. ಯತೀಶ್, ಎಂ.ಸಿ. ಮಂಜುನಾಥ, ಹರೀಶ್ ಪೆರಾಜೆ ಮೊದಲಾದವರಿದ್ದರು.