ಗೋಣಿಕೊಪ್ಪ, ಸೆ. 30: 41ನೇ ವರ್ಷದ ಗೋಣಿಕೊಪ್ಪ ದಸರಾ ಆಚರಣೆಯ ಕಾವೇರಿ ಕಲಾ ವೇದಿಕೆ ಯನ್ನು ಪೊನ್ನಂಪೇಟೆ ರಾಮಕೃಷ್ಣ ಗೋಣಿಕೊಪ್ಪ, ಸೆ. 30: 41ನೇ ವರ್ಷದ ಗೋಣಿಕೊಪ್ಪ ದಸರಾ ಆಚರಣೆಯ ಕಾವೇರಿ ಕಲಾ ವೇದಿಕೆ ಯನ್ನು ಪೊನ್ನಂಪೇಟೆ ರಾಮಕೃಷ್ಣ ಪೂಜೆ ಕಾರ್ಯಕ್ಕೆ ಶುಭ ಕೋರಿದರು.

ಈ ಸಂದರ್ಭ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕೆ.ಜಿ. ರಾಮಕೃಷ್ಣ, ಹಿರಿಯ ರಾದ ಡಾ. ಶಿವಪ್ಪ, ಬಿ. ಡಿ. ಮುಕುಂದ, ಕೇಶವ ಕಾಮತ್, ಬಾಲಕೃಷ್ಣರೈ, ಪೊನ್ನಿಮಾಡ ಸುರೇಶ್ ದಸರಾ ಜನರಿಗೆ ಸುಖ, ಶಾಂತಿ, ನೆಮ್ಮದಿ ನೀಡಲಿ ಎಂದು ಹಾರೈಸಿದರು.ನಡೆಯಿಂದ ವೇದಿಕೆಗೆ ಜನರು ಸುಳಿಯದಂತಾಗಿದೆ. ಜನೋತ್ಸವದಲ್ಲಿ ಜನರೇ ಇಲ್ಲದಿದ್ದರೆ ಕಲೆಗೆ ಪ್ರೋತ್ಸಾಹ ಹೇಗೆ ದೊರೆಯಲು ಸಾಧ್ಯ. ಎಲ್ಲರನ್ನೂ ಒಂದುಗೂಡಿಸುವ ಪ್ರಯತ್ನ ನಡೆಯ ಬೇಕಿತ್ತು ಎಂದು ಹೇಳಿದರು.

(ಮೊದಲ ಪುಟದಿಂದ) ಸ್ಥಳೀಯ ಕಾರ್ಯಕ್ರಮವಾಗಿ ಉಮಾಮಹೇಶ್ವರಿ ಭಜನಾ ಮಂಡಳಿ ಸದಸ್ಯರು ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ಡಾ. ಕಾಳಿಮಾಡ ಶಿವಪ್ಪ, ಸುಮಿ ಸುಬ್ಬಯ್ಯ ಅವರಿಂದ ಹಾಡುಗಾರಿಕೆ ಮೂಡಿ ಬಂತು. ಕಲಾವಿದ ವಿ. ಟಿ. ಶ್ರೀನಿವಾಸ್, ಸದಸ್ಯರಾದ ಸುಮಿ ಸುಬ್ಬಯ್ಯ, ರಾಧಾಕೃಷ್ಣ, ಬಾಲಕೃಷ್ಣ ರೈ, ನಾರಾಯಣಸ್ವಾಮಿ ನಾಯ್ಡು ಪಾಲ್ಗೊಂಡಿದ್ದರು.

ವಿದ್ಯಾಶ್ರೀ ನಾಟ್ಯ ಸಂಕಲ್ಪ ತಂಡದಿಂದ ಭರತನಾಟ್ಯ ಪ್ರದರ್ಶನಗೊಂಡಿತು. ಮಕ್ಕಳು ಭರತ ನಾಟ್ಯದ ಮೂಲಕ ಗಮನ ಸೆಳೆದರು. 6 ಕ್ಕೂ ಹೆಚ್ಚು ನೃತ್ಯ ಪ್ರದರ್ಶನಗೊಂಡಿತು. ಮೈಸೂರು ಸುಮರಾಜ್ ಕುಮಾರ್ ತಂಡದಿಂದ ಮಾತನಾಡುವ ಬೊಂಬೆ ಹಾಗೂ ಜಾದು ಪ್ರದರ್ಶನಗೊಂಡಿತು.

ಪುಟ್ಟ ಕಲಾವಿದರ ತಂಡ ಸಂಜೆಯ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಕಲಾಭಿಮಾನಿಗಳಿಲ್ಲದ ಖಾಲಿ ಕುರ್ಚಿ, ಖಾಲಿ ವೇದಿಕೆ ಎದುರು ಕಲಾ ಪ್ರದರ್ಶನ ಮಾಡುವಂತಾಯಿತು. ರಾತ್ರಿ 7.30 ಗಂಟೆಗೆ ಆರಂಭವಾಗಬೇಕಿದ್ದ ಸಭಾ ಕಾರ್ಯಕ್ರಮ ಒಂದು ಗಂಟೆ ವಿಳಂಭವಾಯಿತು. ಪರಿಣಾಮ 9.30 ರವರೆಗೂ ಭಾಷಣ ಕಾರ್ಯಕ್ರಮ ಸಾಂಸ್ಕøತಿಕ ವೇದಿಕೆಯ ಕಡೆಗಣನೆ ಮಾಡಿದಂತಾಯಿತು. ಸಮಿತಿಯ ಒಂದಷ್ಟು ಪ್ರಮುಖರು ಪ್ರೇಕ್ಷಕರಾದರು.

ಇಂದಿನ ಕಾರ್ಯಕ್ರಮ: ತಾ. 1 ರಂದು (ಇಂದು) ಸೃಜನ್ ರಾಧಾಕೃಷ್ಣ ತಂಡದ ಹಾಡುಗಾರಿಕೆ, ನಾಟ್ಯ ನಿನಾದ ನೃತ್ಯ ಶಾಲೆಯ ವಾಲಗ ನೃತ್ಯ, ರಂಗಭೂಮಿ ಪ್ರತಿಷ್ಠಾನ ತಂಡದ ಅಡ್ಡಂಡ ಕಾರ್ಯಪ್ಪ ತಂಡದ ಬದ್‍ಕ್ ನಾಟಕ ಪ್ರದರ್ಶನ, ಚೆಕ್ಕೇರ ಪಂಚಮ್ ತ್ಯಾಗರಾಜ್ ಅವರಿಂದ ಕೊಡವ ಗೀತ ಗಾಯನ ನಡೆಯಲಿದೆ. -ಸುದ್ದಿಪುತ್ರ, ದಿನೇಶ್