ಮಡಿಕೇರಿ, ಸೆ. 29: ಕಂಬಿಬಾಣೆಯ ಸುಭಾಷ್ ಯುವಕ ಸಂಘದಿಂದ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ 20ನೇ ವರ್ಷದ ದಸರಾ ಕ್ರೀಡಾಕೂಟ ಅ. 2 ರಿಂದ ನಡೆಯಲಿದ್ದು, ಅ.27ರಂದು ಸಮಾರೋಪ ಸಮಾರಂಭ ನಡೆಯಲಿದೆ. ಅ. 2 ರಂದು ಬೆಳಗ್ಗೆ 8.30ಕ್ಕೆ ಕೊಡಗರಹಳ್ಳಿಯಿಂದ ಕಂಬಿಬಾಣೆಯವರೆಗೆ ಗುಡ್ಡಗಾಡು ಓಟದ ಸ್ಪರ್ಧೆ ನಡೆಯಲಿದೆ. 10 ಗಂಟೆಗೆ 18 ವರ್ಷದೊಳಗಿನ ಮಕ್ಕಳಿಗೆ ಕಿರಿಯರ ಕಬಡ್ಡಿ ಪಂದ್ಯಾಟ ನಡೆಯಲಿದ್ದು, 10 ಗಂಟೆಯ ಒಳಗಾಗಿ ಹೆಸರು ನೋಂದಾಯಿಸಬೇಕಾಗಿದ್ದು, ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಅ. 5 ಹಾಗೂ 6 ರಂದು ಮುಕ್ತ ಫುಟ್ಬಾಲ್ ಪಂದ್ಯಾಟ ನಡೆಯಲಿದ್ದು, ಅ. 5 ರಂದು ಬೆಳಿಗ್ಗೆ 10 ಗಂಟೆ ಒಳಗಾಗಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ.
ಅ. 13 ರಂದು ಮುಕ್ತ ಕಬಡ್ಡಿ ಪಂದ್ಯಾಟ ನಡೆಯಲಿದೆ. ಅ.20ರಂದು ಮುಕ್ತ ವಾಲಿಬಾಲ್ ಪಂದ್ಯಾಟ ನಡೆಯಲಿದ್ದು, ಪ್ರಶಸ್ತಿ ವಿಜೇತರಿಗೆ ನಗದು ಹಾಗೂ ಆಕರ್ಷಕ ಟ್ರೋಫಿ ವಿತರಿಸಲಾಗುತ್ತದೆ. ಅ.27ರಂದು ದಸರಾ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಲಿದ್ದು, ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪುರುಷರಿಗೆ ಹಗ್ಗ-ಜಗ್ಗಾಟ, ಭಾರದ ಗುಂಡು ಎಸೆತ, 100 ಮೀ ಓಟ, ಸ್ಲೋ ಬೈಕ್ ರೇಸ್, ಎತ್ತರ ಜಿಗಿತ, ಉದ್ದ ಜಿಗಿತ ಹಾಗೂ ಸಂಘದ ಸದಸ್ಯರಿಗೆ ಕೇರಂ ಸಿಂಗಲ್ಸ್, ಡಬಲ್ಸ್, ಚೆಸ್ ನಡೆಯಲಿದೆ. ಮಹಿಳೆಯರಿಗೆ ಹಗ್ಗ-ಜಗ್ಗಾಟ, ಭಾರದ ಗುಂಡು ಎಸೆತ, 100 ಮೀ ಓಟ, ನಿಂಬೆ ಚಮಚ ಓಟ, ಪಾಸಿಂಗ್ ದ ಬಾಲ್, ಸಂಗೀತ ಕುರ್ಚಿ, ಇಟ್ಟಿಗೆ ಹಿಡಿತ ಸ್ಪರ್ಧೆಗಳು ನಡೆಯಲಿದೆ. ಶಾಲಾ ಮಕ್ಕಳಿಗೆ ಹಾಗೂ ಅಂಗನವಾಡಿ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಕ್ರೀಡಾಕೂಟದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 6363773679, 9743036467 ಸಂಪರ್ಕಿಸಬಹುದಾಗಿದೆ.