ಮಡಿಕೇರಿ, ಸೆ. 29: ಸಂಪಾಜೆ ವಲಯ ಜನಜಾಗೃತಿ ಸಮಿತಿಯಿಂದ ತಾ. 30 ರಂದು (ಇಂದು) ನಡೆಯಲಿರುವ ; ಸಮಾಜ ಘಾತುಕ ಶಕ್ತಿಗಳ ವಿರುದ್ಧದ ಹೋರಾಟಕ್ಕೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಬೆಂಬಲ ಘೋಷಿಸಿದ್ದಾರೆ.

ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂಪಾಜೆ ವಲಯ ಸಾಮಾಜಿಕ ಮುಖಂಡ ಬಾಲಚಂದ್ರ ಕಳಗಿ ಅವರ ಕೊಲೆ ಪ್ರಕರಣ ಸಂಬಂಧ; ಇಂದು ನಡೆಯಲಿರುವ ನ್ಯಾಯಕ್ಕಾಗಿ ಹೋರಾಟ ವನ್ನು ಪಕ್ಷ ಬೆಂಬಲಿಸುವದರೊಂದಿಗೆ ನಿರಂತರ ಹೋರಾಟ ರೂಪಿಸುವದಾಗಿ ಅವರು ತಿಳಿಸಿದ್ದಾರೆ.