ನಾಪೆÇೀಕ್ಲು, ಸೆ. 29: ನಾಪೆÇೀಕ್ಲು - ವೀರಾಜಪೇಟೆ ಮುಖ್ಯ ರಸ್ತೆಯ ಕೊಳಕೇರಿ ಬಳಿ ರಸ್ತೆಯಲ್ಲಿ ಗುಂಡಿ ನಿರ್ಮಾಣಗೊಂಡ ಪರಿಣಾಮ ವಾಹನ ಚಾಲಕರಿಗೆ, ಸಾರ್ವಜನಿಕರಿಗೆ ಅಪಘಾತ ಭೀತಿ ಉಂಟಾಗಿದೆ.

ರಸ್ತೆಯ ಮೂರು ಕಡೆಗಳಲ್ಲಿ ರಸ್ತೆಯಲ್ಲಿ ಪೂರ್ತಿ ಗುಂಡಿ ಉಂಟಾಗಿದ್ದು ವಾಹನ ಸಂಚಾರ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈಗಾಗಲೇ ರಸ್ತೆಯಲ್ಲಿ ಮಿನಿ ಲಾರಿಯೊಂದು ಗುಂಡಿಯಲ್ಲಿ ಸಂಚರಿಸುವ ಸಂದರ್ಭ ಮಗುಚಿ ಬಿದ್ದು ರಸ್ತೆ ಸಂಚಾರಕ್ಕೆ ತಡೆ ಉಂಟಾಗಿತ್ತು.

ಈ ರಸ್ತೆಯಲ್ಲಿ ಶಾಲಾ ವಾಹನಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್‍ಗಳು, ವಾಹನಗಳು ಸಂಚರಿಸುತ್ತವೆ. ಚಾಲಕ ಸ್ವಲ್ಪ ಎಚ್ಚರ ತಪ್ಪಿದರೂ ವಾಹನಗಳು ಮಗುಚಿ ಬೀಳುವ ಸಾಧ್ಯತೆಯಿದೆ. ಆದುದರಿಂದ ಅನಾಹುತ ಸಂಭವಿಸುವ ಮೊದಲು ಲೋಕೋಪಯೋಗಿ ಇಲಾಖೆ ರಸ್ತೆ ದುರಸ್ತಿಗೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ದೊಡ್ಡ ವಾಹನಗಳ ಸಂಚಾರ ಮಾತ್ರವಲ್ಲ ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಕೂಡ ಸಂಚರಿಸಲು ಸಾಧ್ಯವಿಲ್ಲದಂತಾಗಿದೆ. ಸಂಬಂಧಿಸಿದವರು ಕೂಡಲೇ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳುವದರ ಮೂಲಕ ಸಾರ್ವಜನಿಕರ ಜೀವ ರಕ್ಷಿಸಬೇಕು ಎಂದು ಸ್ಥಳೀಯರಾದ ಕಲಿಯಂಡ ಹ್ಯಾರಿ ಮಂದಣ್ಣ ಅವರು ಆಗ್ರಹಿಸಿದ್ದಾರೆ.